ಕಾರ್ಕಳ: ದಿನಾಂಕ:01-10-2026(ಹಾಯ್ ಉಡುಪಿ ನ್ಯೂಸ್)ಮಿಯ್ಯಾರು ಗ್ರಾಮದ ನಿವಾಸಿ ಯೋರ್ವರಿಗೆ ಬಜಗೋಳಿಯ ವ್ಯಕ್ತಿ ಗಳೀರ್ವರು ವಿದೇಶದಲ್ಲಿ ಉದ್ಯೋಗದ ವೀಸಾ ದೊರಕಿಸಿ ಕೊಡುವುದಾಗಿ ನಂಬಿಸಿ 2,60000 ಸಾವಿರ ರೂಪಾಯಿ ವಂಚಿಸಿದ್ದಾರೆಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಮಿಯ್ಯಾರು ಗ್ರಾಮದ ನಿವಾಸಿ ಪ್ರಕಾಶ ಆಚಾರ್ಯ (34) ಎಂಬವರು ಪೊಟೋಗ್ರಾಪಿ ವೃತ್ತಿ ಮಾಡುತ್ತಿದ್ದು, ಕಾರ್ಕಳ ತಾಲೂಕಿನ ಬಜಗೋಳಿಯ ಆರೋಪಿ 1. ಕೃಷ್ಣ ಕುಲಾಲ್ ಮತ್ತು 2. ಮೋಹಿತ್, ಬೆಂಗಳೂರು ಎಂಬವರು ಪ್ರಕಾಶ್ ಆಚಾರ್ಯ ರನ್ನು ಸಂಪರ್ಕಿಸಿ ಮಲೇಷಿಯಾದ ರೆಸ್ಟೋರೆಂಟ್ ನಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಜಾಹಿರಾತಿನ ಪೋಟೊ ಮೊಬೈಲಿಗೆ ಕಳುಹಿಸಿ ಬಳಿಕ ಉದ್ಯೋಗದ ಬಗ್ಗೆ ವಿವರ ನೀಡಿ ದಾಖಲೆ ಪತ್ರ ಮಾಡಲು ಮಲೇಷಿಯಕ್ಕೆ ಹೋಗುವ ಖರ್ಚು ಮತ್ತು ವೀಸಾದ ಹಣವನ್ನು ಭರಿಸುವಂತೆ ಪ್ರಕಾಶ ಆಚಾರ್ಯ ರಲ್ಲಿ ಕೇಳಿಕೊಂಡಿದ್ದಾರೆ.
ಆರೋಪಿಗಳಾದ ಕ್ರಿಷ್ಣ ಕುಲಾಲ್ ಮತ್ತು ಮೋಹಿತ್ ರ ಮಾತನ್ನು ನಂಬಿ ಪ್ರಕಾಶ್ ಆಚಾರ್ಯ ರು ಗೂಗಲ್ ಪೇ ಮೂಲಕ ಹಂತಹಂತವಾಗಿ 1,40,000/- ರೂಪಾಯಿ ಯನ್ನು 1ನೇ ಆರೋಪಿಯ ಖಾತೆಗೆ ಹಾಗೂ 85,000/- ರೂಪಾಯಿಯನ್ನು 2 ನೇ ಆರೋಪಿ ಮೋಹಿತ್ ಖಾತೆಗೆ ವರ್ಗಾವಣೆ ಮಾಡಿರುತ್ತಾರೆ.
ಹಣ ಪಡೆದುಕೊಂಡ ಆರೋಪಿತರು ಬಳಿಕ ಪ್ರಕಾಶ್ ಆಚಾರ್ಯ ರಿಗೆ ಮಲೇಷಿಯಕ್ಕೆ ಹೋಗಲು ವಿಮಾನದ ಟಿಕೆಟ್ ಮತ್ತು ಇಮ್ರಿಗೇಷನ್ ಪಾಸ್, ಎಂಪ್ಲಾಯ್ ಮೆಂಟ್ ಪಾಸ್ ಕಳುಹಿಸಿ ಕೊಟ್ಟಂತೆ ಪ್ರಕಾಶ್ ಆಚಾರ್ಯ ರು ಮಲೇಷಿಯಕ್ಕೆ ಹೋದಾಗ ಅಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ದಾಖಲೆ ಪರಿಶೀಲಿಸಿದಾಗ ಆರೋಪಿಗಳು ಪ್ರಕಾಶ್ ಆಚಾರ್ಯ ರಿಗೆ ನೀಡಿದ ಇಮ್ರಿಗೇಷನ್ ಪಾಸ್, ಎಂಪ್ಲಾಯ್ ಮೆಂಟ್ ಪಾಸ್ ನಕಲಿ ಎಂದು ತಿಳಿದು ಬಂದಿರುತ್ತದೆ. ಪ್ರಕಾಶ್ ಆಚಾರ್ಯ ರು ಮಲೇಷಿಯದಲ್ಲಿದ್ದ ಸಮಯ ಮನ್ವಿರ್ ಸಿಂಗ್ ಎಂಬ ಎಜೆಂಟ್ ಪ್ರಕಾಶ್ ಆಚಾರ್ಯ ರಿಂದ 35,000/- ರೂಪಾಯಿ ಪಡೆದುಕೊಂಡಿರುತ್ತಾನೆ.
ಆರೋಪಿಗಳು ಪ್ರಕಾಶ್ ಆಚಾರ್ಯ ರನ್ನು ನಂಬಿಸಿ ಸುಳ್ಳು ದಾಖಲೆ ನೀಡಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕಾಶ್ ಆಚಾರ್ಯ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2026 ಕಲಂ: 316(2), 318(4), 336(3), 340(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
