ಬೈಂದೂರು: ದಿನಾಂಕ : 02-10-2026(ಹಾಯ್ ಉಡುಪಿ ನ್ಯೂಸ್) ತಗ್ಗರ್ಸೆ ಗ್ರಾಮದ ನಿವಾಸಿ ಚಂದ್ರಾವತಿ ಎಂಬವರ ಮನೆಗೆ ನೆರೆಮನೆಯ ವ್ಯಕ್ತಿ ಯೋರ್ವ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಂದೂರು,ತಗ್ಗರ್ಸೆ ಗ್ರಾಮದ ನಿವಾಸಿ ಚಂದ್ರಾವತಿ (68) ಎಂಬವರು ದಿನಾಂಕ:30-09-2026 ರಂದು ಅವರ ಮನೆಯ ಹಿಂಬದಿ ಹಿತ್ತಲಲ್ಲಿ ಅಡಿಕೆ ಗಿಡವನ್ನು ನೆಟ್ಟಿದ್ದಾರೆ. ನಂತರ 1 ನೇ ಆಪಾದಿತ .ಕೆ. ವಿ . ಶ್ರೀಧರ ಎಂಬವ ಚಂದ್ರಾವತಿ ರವರ ಜಾಗಕ್ಕೆ ಪ್ರವೇಶಿಸಿ ಚಂದ್ರಾವತಿ ರವರಿಗೆ ಮತ್ತು ಅವರ ಯಜಮಾನರಾದ ಗೋಪಾಲ ಶೇರಿಗಾರರವರನ್ನು ಉದ್ದೇಶಿಸಿ ಅವಾಚ್ಯ ಶಬ್ದ ಗಳಿಂದ ಬೈದು ಗೋಪಾಲ ಶೇರಿಗಾರ ರವರಿಗೆ ಕೈಯಿಂದ ಹೊಡೆದರು . ನಂತರ ಚಂದ್ರಾವತಿರವರು ಗಲಾಟೆ ತಪ್ಪಿಸಲು ಹೋದಾಗ 2 ನೇ ಆಪಾದಿತೆ ಪ್ರತೀಮಾ ಒಂದು ಕಲ್ಲಿನಿಂದ ಚಂದ್ರಾವತಿ ರವರಿಗೆ ಹೊಡೆದ ಪರಿಣಾಮ ಚಂದ್ರಾವತಿ ರವರ ಬಲ ಭುಜಕ್ಕೆ ಗಾಯಗೊಂಡು ಬೈಂದೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 129/2026 ಕಲಂ: 329(3), 352, 118(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
