file_0000000039648211aacf6d7a6d0f363e.png
Spread the love

ಕಾರ್ಕಳ: ದಿನಾಂಕ:01-10-2026(ಹಾಯ್ ಉಡುಪಿ ನ್ಯೂಸ್) ಇಪ್ಪತ್ತು ತಿಂಗಳ ಸ್ಕೀಮ್ ನಂತರ ಸೊತ್ತು ನೀಡುವುದಾಗಿ ನಂಬಿಸಿ ಹಣ ಪಡೆದು ಕೊನೆಗೆ ಸ್ವತ್ತು ಅಥವಾ ಇಪ್ಪತ್ತು ಸಾವಿರ ಹಣವನ್ನು ನೀಡದೆ ವಂಚನೆ ನಡೆಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ,ಮರ್ಣೆ ಗ್ರಾಮದ ನಿವಾಸಿ ರಶ್ಮಿ ಕುಲಾಲ್‌ (24), ಎಂಬವರು  ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಶ್ರೀ ದುರ್ಗಾ ಇಲೆಕ್ಟ್ರಾನಿಕ್ಸ್‌ & ಫರ್ನಿಚರ್‌ ಅಂಗಡಿಯನ್ನು ತೆರೆದು ವ್ಯವಹರಿಸಿಕೊಂಡಿದ್ದ ಆಪಾದಿತ ಜಯತೀರ್ಥ ಎಂಬವನು ತನ್ನ ಅಂಗಡಿ ಯಲ್ಲಿ ಲಕ್ಕಿ ಗಿಪ್ಟ್‌ ಸ್ಕೀಮ್‌ ನಡೆಸುತ್ತಿದ್ದು, ಪ್ರತೀ ತಿಂಗಳು ಸ್ಕೀಮ್‌ ಗೆ ರೂಪಾಯಿ 1,000/- ರಂತೆ ಒಟ್ಟು 20 ತಿಂಗಳು 20,000/- ಕಂತಿನ ಹಣ ಕಟ್ಟಿದ್ದು, ಪ್ರತೀ ತಿಂಗಳು ಲಕ್ಕಿ ಡ್ರಾ ನಡೆಸಿ ವಿಜೇತರಿಗೆ ಸೊತ್ತನ್ನು ನೀಡುವುದಾಗಿ ನಂಬಿಸಿ, ಸ್ಕೀಮ್‌ ಅವದಿ ಮುಗಿದ ಮೇಲೆ ಹಣ ಅಥವಾ ಯಾವುದಾದರೂ ಸೊತ್ತನ್ನು ನೀಡುವುದಾಗಿ ನಂಬಿಸಿ, ಪ್ರತಿ ತಿಂಗಳು ಕಟ್ಟಿದ ಹಣ ಅಥವಾ ಗಿಪ್ಟ್‌ ಕೂಡಾ ನೀಡದೇ ರಶ್ಮಿ ಕುಲಾಲ್ ರಿಗೆ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಶ್ಮಿ ಕುಲಾಲ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2026 ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!