IMG_20260924_190412.png
Spread the love

ಪಡುಬಿದ್ರಿ: ದಿನಾಂಕ:24-09-2026(ಹಾಯ್ ಉಡುಪಿ ನ್ಯೂಸ್) ಪಡುಬಿದ್ರಿಯ ಕರ್ಣಾಟಕ ಬ್ಯಾಂಕ್ ಶಾಖೆಗೆ ನಾಲ್ವರು ಆರೋಪಿಗಳು ಮೂರು ಕೋಟಿ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .

1 ನೇ ಆರೋಪಿ M/s. Lalitha Aqua Farm ಒಂದು Proprietorship ಸಂಸ್ಥೆಯಾಗಿದ್ದು, 2 ನೇ ಆರೋಪಿ ಶ್ಯಾಮ್ ಪ್ರಸಾದ್ ಎಸ್. ಅವರು ಅದರ ಮಾಲೀಕರಾಗಿದ್ದಾರೆ. ಆರೋಪಿ ಸಂಖ್ಯೆ 3 ಶೈಲಜಾ, ಆರೋಪಿ ಸಂಖ್ಯೆ 2 ರವರ ಪತ್ನಿಯಾಗಿದ್ದು, ಆರೋಪಿ ಸಂಖ್ಯೆ 4. ನಂದ ಪ್ರಸಾದ್ ಯಾನೆ ಶಿವಪ್ರಸಾದ್ ಇವರು ಆರೋಪಿ ಸಂಖ್ಯೆ 2ರ ಸಹೋದರರಾಗಿದ್ದಾರೆ. ಆರೋಪಿ 3 ಮತ್ತು 4 ಅವರು ಜಾಮೀನುದಾರರಾಗಿದ್ದು, ಆರೋಪಿ ಸಂಖ್ಯೆ 1 ಮತ್ತು 2 ರೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಆರೋಪಿಗಳೆಲ್ಲರು ನಂಬಿಸಿ ಮೋಸ ಮಾಡುವುದೇ ಉದ್ದೇಶ ಹೊಂದಿ ಕರ್ಣಾಟಕ ಬ್ಯಾಂಕ್ ಗೆ ವಂಚನೆ ನಡೆಸಿದ್ದಾರೆ.

ಪ್ರವೀಣ್ ಶೆಟ್ಟಿ (43), ವ್ಯವಸ್ಥಾಪಕರು ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಗ್ರೌಂಡ್ ಫ್ಲೋರ್, ಅಮೃತ ಟವರ್ಸ್,ಮೇನ್ ರೋಡ್, ಪಡುಬಿದ್ರಿ, ಉಡುಪಿ ಅವರು ವ್ಯವಸ್ಥಾಪಕರಾಗಿರುವ ಕಾಫು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರೆ ಕರ್ನಾಟಕ ಬ್ಯಾಂಕ್‌ನಿಂದ ದಿನಾಂಕ 06/02/2023 ರಂದು ರೂಪಾಯಿ 1,00,00,000/- ಹಾಗೂ ದಿನಾಂಕ 10/02/2023 ರಂದು ರೂಪಾಯಿ 2,00,00,000/- ಸಿಗಡಿ ಸಾಕಾಣಿಕೆ ಘಟಕ ಸ್ಥಾಪನೆ ಬಗ್ಗೆ ಸಾಲ ಪಡೆದುಕೊಂಡು, ನಂತರ ಆರೋಪಿಗಳು ಪಡೆದ ಸಾಲದ ಹಣವನ್ನು ಸಿಗಡಿ ಸಾಕಾಣಿಕೆ ಘಟಕ ಸ್ಥಾಪನೆಗೆ ಉಪಯೋಗಿಸದೇ ರಿಯಲ್‌ ಎಸ್ಟೇಟ್‌ ವ್ಯವಹಾರ ಹಾಗೂ ಆಭರಣ ಖರೀದಿ ಮಾಡಲು ಉಪಯೋಗಿಸಿ ಸಾಲವನ್ನು ಸರಿಯಾಗಿ ಮರುಪಾವತಿ ಮಾಡದೇ ಪ್ರವೀಣ್ ಶೆಟ್ಟಿ ಯವರಿಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರವೀಣ್ ಶೆಟ್ಟಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2026 ಕಲಂ: 316,318,320,61(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!