ಕಾರ್ಕಳ: ದಿನಾಂಕ 24/09/2026(ಹಾಯ್ ಉಡುಪಿ ನ್ಯೂಸ್ )ಕಸಬಾ ಗ್ರಾಮದ ಕಲ್ಲೊಟ್ಟೆ-ಪತ್ತೊಂಜಿಕಟ್ಟೆ ರಸ್ತೆ ಯಲ್ಲಿರುವ ಕಟ್ಟಡವೊಂದರ ಕೋಣೆಯಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಅವರು ಬಂಧಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಅವರಿಗೆ ದಿನಾಂಕ:23-09-2026 ರಂದು ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಲ್ಲೊಟ್ಟೆ-ಪತ್ತೊಂಜಿಕಟ್ಟೆ ಸಾರ್ವಜನಿಕ ರಸ್ತೆ ಬದಿಯ ಗೋಕರ್ಣನಾಥ ಕೋ ಒಪರೇಟಿವ್ ಸೊಸೈಟಿ ಬಳಿಯ ಕಟ್ಟಡದ 1 ಕೋಣೆಯಲ್ಲಿ ಆರೋಪಿ ಸಾಗರ್ ಎಂಬಾತ ಸಾರ್ವಜನಿಕರಿಂದ ಮಟ್ಕ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ .
ಆರೋಪಿ ಸಾಗರ್ ನು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ಹಣ ಒಟ್ಟು 3,440/-, ಮಟ್ಕಾ ಸಂಖ್ಯೆ ಬರೆದ ಚೀಟಿ, ಪೆನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/2026 ಕಲಂ: 78(1),(3) KP Açt ರಂತೆ ಪ್ರಕರಣ ದಾಖಲಾಗಿದೆ.
