IMG_20260923_001910.png
Spread the love

ಕಾರ್ಕಳ: ದಿನಾಂಕ:23-09-2026(ಹಾಯ್ ಉಡುಪಿ ನ್ಯೂಸ್) ಆರ್ಥಿಕ ಇಲಾಖೆ ನೀಡಿರುವ ಈ ಎಚ್ಚರಿಕೆ ಕಾಂಗ್ರೆಸ್ ಸರ್ಕಾರದ ಆಡಳಿತದ ಅಸಲಿ ಚಿತ್ರಣವನ್ನು ಬಯಲು ಮಾಡಿದೆ ಎಂದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.


ದಿನಬೆಳಗಾದರೆ ಹಣಕಾಸು ಮೂಲ ತಿಳಿಸದೇ ಸಾವಿರಾರು ಕೋಟಿ ರೂ. ಯೋಜನೆ ಘೋಷಣೆ ಮಾಡುತ್ತಿದ್ದ ಮುಖ್ಯಮಂತ್ರಿ ಕಚೇರಿಗೆ ಹೊಸ ಯೋಜನೆ ಘೋಷಿಸುವ ಮುನ್ನ ಹೊಸ ಆದಾಯದ ಮೂಲ ಹುಡುಕಬೇಕು ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ. ಇದು ಸರ್ಕಾರದ ಆರ್ಥಿಕ ಅಶಿಸ್ತು ಹಾಗೂ ದಿವಾಳಿತನಕ್ಕೆ ಸಾಕ್ಷಿ.
ರಾಜ್ಯದ ಬಾಕಿ ಹೊಣೆಗಾರಿಕೆ GSDPಯ 24.94%ಕ್ಕೆ ತಲುಪಿದೆ. ಕಾಮಗಾರಿಗಳ ಬಿಲ್‌ಗಳು ಬಾಕಿ, ಸಾವಿರಾರು ಕೋಟಿ ಪಾವತಿಗಳು ಬಾಕಿ, ವೇತನ–ಸಬ್ಸಿಡಿಗಳ ಹೊರೆ ಇದೆ. ಆದರೂ ರಾಜಕೀಯ ಘೋಷಣೆಗಳಿಗೆ ಮಾತ್ರ ಡಿ.ಕೆ.ಶಿವಕುಮಾರ್ ಸರ್ಕಾರ ಉತ್ಸಾಹ ತೋರುತ್ತಿದೆ. ಕಾಂಗ್ರೆಸ್ ಸರ್ಕಾರ ಪ್ರಚಾರ ಬಿಟ್ಟು , ಆರ್ಥಿಕ ಶಿಸ್ತನ್ನು ತೋರಿಸಲಿ ಎಂದು ಹೇಳಿದ್ದಾರೆ.

error: No Copying!