ಕಾರ್ಕಳ: ದಿನಾಂಕ:22-09-2026(ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವರ ಖಾತೆಯಿಂದ ಆನ್ಲೈನ್ ಮೂಲಕ 96000 ರೂಪಾಯಿ ಹಣವನ್ನು ಯಾರೋ ಸೈಬರ್ ವಂಚಕರು ಕದ್ದಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ನಿವಾಸಿ ಧರ್ಮರಾಜ ಭಂಗ ಎಂಬವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದು, ದಿನಾಂಕ 15/09/2026 ರಂದು 12:51 ಗಂಟೆಗೆ ಅಪರಿಚಿತ ಕರೆ ಬಂದಿದ್ದು, ಆ ಕರೆಯನ್ನು ಧರ್ಮರಾಜ ಭಂಗರವರು ಸ್ವೀಕರಿಸಿದಾಗ ,ನೀವು ಖಾತೆ ಹೊಂದಿರುವ ಹತ್ತಿರದ ಬ್ಯಾಂಕ್‌ಗ ಹೋಗಿ ವಿಚಾರಿಸಿ ಎಂದು ತಿಳಿಸಿದ್ದು ಅಪರಾಹ್ನ 2 ಗಂಟೆಗೆ ಮೊಬೈಲ್ ನಲ್ಲಿರುವ ಪೋನ್ ಪೇಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಅದರಲ್ಲಿ ಖಾತೆಯಲ್ಲಿದ್ದ ಎಲ್ಲ 96,000/- ರೂಪಾಯಿ ಕಡಿತಗೊಂಡಿರುವುದು ಕಂಡು ಬಂದಿದ್ದು, ನಂತರ ಬ್ಯಾಂಕ್‌ಗೆ ಹೋಗಿ ಚೆಕ್ ಮಾಡಿದಾಗ ಖಾತೆಯಲ್ಲಿದ್ದ ಎಲ್ಲ ಹಣ ಕಡಿತವಾಗಿರುತ್ತದೆ. ಧರ್ಮರಾಜ ಭಂಗರವರ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಯಾರೋ ಅಪರಿಚಿತ ಸೈಬರ್ ವಂಚಕರು ಆನ್ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಧರ್ಮರಾಜ ಭಂಗರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2026 ಕಲಂ: 66(D) IT ACT ರಂತೆ ಪ್ರಕರಣ ದಾಖಲಾಗಿದೆ.
