file_00000000712c81f8a7e46ae089c535b6.png
Spread the love

ಕುಂದಾಪುರ: ದಿನಾಂಕ:21-09-2026(ಹಾಯ್ ಉಡುಪಿ ನ್ಯೂಸ್) ದೇವಲ್ಕುಂದ ಗ್ರಾಮದಲ್ಲಿ ವಾಸವಾಗಿರುವ ಒಂಟಿ ಮಹಿಳೆಯೋರ್ವರ ಮನೆಗೆ ರಾತ್ರಿ ಯಾರೋ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ,ದೇವಲ್ಕುಂದ ಗ್ರಾಮದ ನಿವಾಸಿ ಇಂದಿರಾ (53) ಎಂಬವರ ಮನೆಗೆ ದಿನಾಂಕ 04/09/2026 ರಂದು ರಾತ್ರಿ 11:00 ಗಂಟೆಯ ಸಮಯದಲ್ಲಿ ಕೆಲವು ವ್ಯಕ್ತಿಗಳು  ಮನೆಯ ಕಂಪೌಂಡ್‌ ಒಳಗೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗೆ ಪ್ರವೇಶಿಸಲು ಅಥವಾ ಯಾವುದೋ ಕೃತ್ಯ ನಡೆಸಲು ಪ್ರಯತ್ನಿಸಿದ್ದು, ಆಗ ಇಂದಿರಾರವರು ಭಯಗೊಂಡು ಜೋರಾಗಿ ಕೂಗಿದಾಗ ಅಲ್ಲಿಂದ ಓಡಿ ಹೋಗಿರುತ್ತಾರೆ.

ಈ ಘಟನೆಗೆ ಸಂಬಂಧಿಸಿದಂತೆ ಇಂದಿರಾರವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ ಇಂದಿರಾರವರ ಮನೆಗೆ ಬಂದ ವ್ಯಕ್ತಿ ಮಿಥುನ ಎಂಬವ ಆಗಿರುವ ಅನುಮಾನ ಇರುತ್ತದೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇಂದಿರಾರವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/2026 ಕಲಂ: 329(3) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!