ಶಿರ್ವಾ: ದಿನಾಂಕ 21/09/2026(ಹಾಯ್ ಉಡುಪಿ ನ್ಯೂಸ್) ಶಿರ್ವ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುದೇಶ್ ಶೆಟ್ಟಿ ರವರು ದಾಳಿ ನಡೆಸಿ ಜೂಜಾಟ ನಡೆಸುತ್ತಿದ್ದ ಒಂಬತ್ತು ಜನರನ್ನು ಬಂಧಿಸಿದ್ದಾರೆ.
ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುದೇಶ್ ಶೆಟ್ಟಿ ಅವರು ದಿನಾಂಕ:20-09-2026 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರ್ವ ಗ್ರಾಮದ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಬಾಲುಗಳನ್ನು ಕಟ್ಟಿ, ಒಂದು ಕೋಳಿಯನ್ನು ಇನ್ನೊಂದು ಕೋಳಿಯ ಮೇಲೆ ಬಿಟ್ಟು ಕೋಳಿ ಹುಂಜಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಜೂಜಾಟ ನಡೆಸುತ್ತಿದವರನ್ನು ಗಮನಿಸಿ ಕೂಡಲೇ ದಾಳಿ ನಡೆಸಿದ್ದಾರೆ .
ದಾಳಿ ನಡೆಸಿದಾಗ ಸ್ಥಳದಲ್ಲಿ ಇದ್ದ 1.ನರೇಂದ್ರ ಫ್ರಭು(61), ಸೂಡಾ ಗ್ರಾಮ, ಕಾರ್ಕಳ, 2.ಪ್ರಕಾಶ್ ಕಾಮತ್(45), ಬೆಳ್ಮಣ್ ಗ್ರಾಮ, ಕಾರ್ಕಳ, 3.ರಮೇಶ(49),ಇನ್ನಾ ಗ್ರಾಮ, ಕಾರ್ಕಳ, 4.ಜಯ ಪೂಜಾರಿ(64),ಇನ್ನಾ ಗ್ರಾಮ, ಕಾರ್ಕಳ,5.ರಾಘವೇಂದ್ರ(48), ಪಾಂಗಾಳ ಗ್ರಾಮ, ಉಡುಪಿ, 6.ಜೆರಾಲ್ಡ್ ಮಥಾಯಸ್(67),ಶಿರ್ವ ಗ್ರಾಮ, ಕಾಫು , 7.ರಮೇಶ್ ಮೂಲ್ಯ(50), ನಂದಳಿಕೆ ಗ್ರಾಮ, ಕಾರ್ಕಳ , 8.ಅಶೋಕ(48), ಬೋಳ ಗ್ರಾಮ, ಕಾರ್ಕಳ ತಾಲೂಕು, 9.ರೋಹಿತ್ ಸರೋಜನ್(26), ನಂದಳಿಕೆ ಗ್ರಾಮ, ಕಾರ್ಕಳ ಇವರಿಂದ ಜೂಜಾಟಕ್ಕೆ ಬಳಸಿದ್ದ ಸ್ಥಳದಲ್ಲಿದ್ದ 10,600/- ಮೌಲ್ಯದ 13 ಕೋಳಿ ಹುಂಜ ಹಾಗೂ ಕೋಳಿ ಬಾಳು-5, ಜೂಜಾಟಕ್ಕೆ ಬಳಸಿದ್ದ ನಗದು 2000/- ಕೃತ್ಯ ಸ್ಥಳಕ್ಕೆ ಬಂದ 10 ದ್ವಿಚಕ್ರ ವಾಹನ, 25 ಹಳೆಯ ಪ್ಲಾಸ್ಟಿಕ್ ಕುರ್ಚಿ, ಶ್ಯಾಮಿಯಾನ, ಶ್ಯಾಮಿಯಾನ ಹಾಕಲು ಬಳಸಿದ ಕಬ್ಬಿಣದ ಪೈಪ್-8 ಇವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 78/2026 ಕಲಂ: 112 BNS 2023 U/s 87, 93 KP ACT. U/s 11(1)(n) Prevention of cruelty animal Act ರಂತೆ ಪ್ರಕರಣ ದಾಖಲಾಗಿದೆ.
