ಕೋಟ : ಜೂನ್ 9 (ಹಾಯ್ ಉಡುಪಿ ನ್ಯೂಸ್) ಮನೆಯ ಮಾಲಕತ್ವದ ವಿಚಾರದಲ್ಲಿ ತಮ್ಮ ಅಕ್ಕನಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಕುಂದಾಪುರ ತಾಲೂಕು , ಬೇಳೂರು ಗ್ರಾಮ,ಗುಳ್ಳಾಡಿ ರೈಸ್ ಮಿಲ್ ಬಳಿ ನಿವಾಸಿ ಶ್ರೀಮತಿ ವನಜ (೫೪) ಮತ್ತು ಅವರ ಗಂಡ ದಿನಾಂಕ 7/06/2022 ರಂದು ರಾತ್ರಿ ಮನೆಯಲ್ಲಿರುವಾಗ ಮನೆಯ ಪಕ್ಕದಲ್ಲಿ ವಾಸವಾಗಿರುವ ಅವರ ತಮ್ಮ ಉದಯ ಎಂಬಾತ ಏಕಾಏಕಿ ಕೈಯಲ್ಲಿ ಕತ್ತಿ ಹಿಡಿದುಕೊಂಡು ವನಜರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ವನಜರವರ ರಟ್ಟೆಯನ್ನು ಹಿಡಿದು ಮನೆಯ ಹೊರಗಡೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ ವನಜರವರ ಗಂಡ ಗಲಾಟೆಯನ್ನು ತಪ್ಪಿಸಲು ಬಂದಾಗ ಉದಯನು ವನಜರವರ ಗಂಡ ನಾರಾಯಣರನ್ನು ದೂಡಿ ಕಾಲಿನಿಂದ ತುಳಿದಿರುತ್ತಾನೆ ಹಾಗೂ ವನಜರವರ ಬೆನ್ನಿಗೆ ಕೈಯಿಂದ ಬಲವಾಗಿ ಹೊಡೆದಿರುತ್ತಾನೆ ಎಂದು ದೂರಲಾಗಿದೆ.ಅವರು ಕೂಗಿಕೊಂಡಾಗ ಉದಯನು ಮನೆಯ ಕಿಟಕಿಯ ಗಾಜುಗಳನ್ನು ಕತ್ತಿಯಿಂದ ಒಡೆದು ವನಜರವರನ್ನು ಉದ್ದೇಶಿಸಿ ಇದು ನಮ್ಮ ಮನೆ ನೀವು ಮನೆಯನ್ನು ಖಾಲಿ ಮಾಡದೇ ಇದ್ದರೆ ಪುನಃ ಬಂದು ನಿಮ್ಮನ್ನು ಇದೇ ಕತ್ತಿಯಿಂದ ಕಡಿಯುತ್ತೇನೆಂದು ಹೇಳಿ ಅಲ್ಲಿಂದ ಹೋಗಿರುತ್ತಾನೆ ಎಂದು ವನಜರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.