‘ಸಮಾಜದ ಬದಲಾವಣೆಗೆ ಸಾಹಿತಿಗಳ ಕೂಗು.’
( ಮರು ಜನ್ಮ ತಾಳಿದ ) ಸರ್ಕಾರದ ಕಣ್ಣಿಗೆ ಕಾಣದೆ ಮರೆಯಲ್ಲಿ ಉಳಿದ ಬಾಲ್ಯವಿವಾಹ , ವರದಕ್ಷಿಣೆ.
ಇಂದು ನನ್ನ ಮಾತುಗಳನ್ನು ನೇರವಾಗಿ ಕೋಪದಿಂದಲೇ ನುಡಿಯುತ್ತೇನೆ.ನನ್ನ ಮಕ್ಕಳು ಓದಿ ಒಂದು ನೆಲೆ ನಿಲ್ಲಬೇಕು , ಗುರಿ ಮುಟ್ಟಬೇಕು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು ಎಂದು ಕನಸು ಕಾಣುವ ತಂದೆತಾಯಿಗಳು ಬೇರೆ.ಬಡತನದಲ್ಲಿ ಅಯ್ಯೋ ಹತ್ತನೇ ತರಗತಿ ಮುಗಿದರೆ ಸಾಕು ಮಗಳ ಮದುವೆ ಮಾಡಿ ಬಿಡೋಣ ಎಂಬ ತಂದೆ-ತಾಯಿಗಳು ಬೇರೆ. ಯಾಕೆಂದರೆ
ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳು ಎಂದು ಬದುಕುವುದು ಕಷ್ಟಸಾಧ್ಯವಾಗಿದೆ.ಈ ರೀತಿ ಸಮಾಜ ಹಾಳಾಗಲು ಕಾರಣ ಯಾರು.? ನಾವೇ , ಈ ತಂದೆ ತಾಯಿಗಳೇ , ನಮ್ಮ ಜನಗಳೇ , ನಮ್ಮ ಸಮಾಜದ ಸಾಂಪ್ರದಾಯ- ಸಂಸ್ಕೃತಿಗಳೇ , ಈ ಶುದ್ಧ ಸಮಾಜ ಅಶುದ್ಧವಾಗಲು ಕಾರಣ. ಈ ಬರಹದಲ್ಲಿ ಈ ಕೆಟ್ಟ ಸಮಾಜವನ್ನು ಯಾವ ರೀತಿ ಉಗಳಬೇಕೆಂದು ಯೋಚಿಸುತ್ತೇನೆ.’ಸಮಾಜದ ತಪ್ಪಲ್ಲ ಸಮಾಜದ ಜನರ ತಪ್ಪು.’ ನಮ್ಮಂತಹ ಸಾಹಿತಿಗಳ ಕಾರ್ಯವೇ ಸಮಾಜದ ಬದಲಾವಣೆ, ಶುದ್ಧ ಸಮಾಜದ ನಿರ್ಮಾಣ , ಮನಸ್ಸಂತೋಷಕ್ಕೆ ಬರಹಗಳ ಗೀಚುವುದು.
ಮನೆಯಲ್ಲಿ ಒಂದು ಹೆಣ್ಣು ಇದ್ದರೆ ಸಾಕು ಅದು ತಂದೆತಾಯಿಗಳ ಮೇಲೆ ಇರುವ ಒಂದು ದೊಡ್ಡ ತಲೆನೋವು ಎಂಬಂತೆ ಈ ಸಮಾಜ. ಅವಳು ವಯಸ್ಸಿಗೆ ಬಂದಿದ್ದಾಳೆ ಅಂದ್ರೆ ಸಾಕು, ಆದರೆ ಅವಳು ನಿಜವಾಗಿಯೂ ಮಾನಸಿಕವಾಗಿ ಬೌದ್ಧಿಕವಾಗಿ ಅವಳ ಬುದ್ಧಿಶಕ್ತಿ ಬೆಳೆದಿರುವುದಿಲ್ಲ . ಹರೆಯದ ಮನಸ್ಸಿಗೆ ವಯಸ್ಸಿಗೆ ಸಂಸಾರದ ಅರಿವಿರುವುದಿಲ್ಲ 15 ರ ಹಾಗೆ ಹದಿನಾರರ ಹೆಣ್ಣು ಹುಡುಗಿಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಬಿಡುವುದು. ಆ ಹೆಣ್ಣುಮಗಳು ಹೊತ್ತ ಕನಸು ಆಸೆ ಗುರಿ ಇತ್ಯಾದಿಗಳು ಆ ಮದುವೆ ಅಗ್ನಿಯಲ್ಲಿ ತಾಳಿಯ ಮೂರು ಗಂಟಿನಲ್ಲಿ ಗಂಟಾಗಿ ಗುಟ್ಟಾಗಿ ಉಳಿದು ಬಿಡುತ್ತವೆ ಅವಳ ಎದೆಯಲ್ಲಿ . ಪ್ರಾಚೀನಕಾಲದಿಂದಲೂ ಹೆಣ್ಣು ಎಂದರೆ ದೇವತೆ ಆದರೆ ಆ ದೇವತೆಯೇ ಇಂದಿನ ಸಮಾಜದಲ್ಲಿ ಬೆತ್ತಲಾಗಿ , ಅತ್ಯಾಚಾರ , ಲೈಂಗಿಕ ಕಿರುಕುಳ , ವರದಕ್ಷಿಣೆ ಕಿರುಕುಳಕ್ಕೆ ಸಿಕ್ಕಿ ನೇಣಿನ ಕುಣಿಕೆಗೆ ಶರಣಾಗಿದ್ದಾಳೆ. ಇದರ ವಿರುದ್ಧ ಪ್ರಶ್ನೆಸುವ ಜನರಾಗಲಿ, ಸರ್ಕಾರವಾಗಲಿ ಅವಳಿಗೆ ನ್ಯಾಯ ಇಲ್ಲದಂತೆ , ಸಮಾಜ ಅವಳನ್ನು ಒಂದು ಕಾಮ ತೀರಿಸುವ ವಸ್ತುವಾಗಿ ಉಪಯೋಗಿಸಿ ಕಸದ ರೀತಿ ಕೈವರಸಿ ತೊಳೆದು ಬಿಟ್ಟಿದೆ. ದಯಬಿಟ್ಟು ಯಾರೂ ಅನ್ಯಥಾ ಭಾವಿಸಬೇಡಿ ನಾನು ಇರ್ವುದನ್ನು ಸ್ಪಷ್ಟವಾಗಿ ನೇರವಾಗಿ ಬರೆಯುತ್ತಿದ್ದೇನೆ. ನೇರವಾಗಿ ಹೇಳಿದರು ಬದಲಾಗದ ಜನ, ಜನರ ಮನಸ್ಸು ಇನ್ನ ಹೀಗೆ ಅರ್ಥವಾಗುವ ರೀತಿ ಹೇಳಿದರೆ ಈ ಮೂಡ- ದಡ್ಡ ಕಳ್ಳ ಮಕ್ಕಳ ಸಮಾಜಕ್ಕೆ ಹೇಗೆ ಅರ್ಥವಾದೀತು.!? ಅಲ್ಲ ಒಮ್ಮೆ ನೀವೇ ಯೋಚನೆ ಮಾಡ್ರಿ…
ಯಾರೋ ಒಬ್ಬ ಒಂದು ವೇದಿಕೆ ಸಿಕ್ಕಿದರೆ ಸಾಕು ಮುಂದೆ ಊಟ ಮಾಡಿ ಕಾಫಿ ಕುಡಿದು ಸಮಯ ಕಳೆಯಲು ಎಂಜಲು ಕಾಸಿಗೆ ಚಪ್ಪಾಳೆ ಹೊಡೆಯುವವರು ಜೈಕಾರ ಕೂಗುವರು ಇದ್ದರೆ ಸಾಕು ಸಮಾಜದ ಬಗ್ಗೆ ದೇಶದ ಅಭಿವೃದ್ಧಿ ಬಗ್ಗೆ ಶಿಕ್ಷಣದ ಬಗ್ಗೆ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ಮಾತನಾಡಿದ್ದು ಮಾತನಾಡಿದ್ದೆ ಆದರೆ ಯಾರೂ ಕೂಡ ಹೆಣ್ಣಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ನಿಜ ತಾನೇ ನಿಮ್ಮ ಮನಸ್ಸನ್ನು ನೀವೇ ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ. ‘ ಎಲುಬಿಲ್ಲದ ನಾಲಿಗೆ ‘ ನುಡಿದಂತೆ ನಡೆಯುವ ವನ್ನು ಇಂದು ಯಾರು ಇಲ್ಲ , ಇಲ್ಲಿ ಬರೆದ ನಾನು ಸಹ . ಇಲ್ಲಿಯವರೆಗೂ ಸಮಾಜ ಬಾಲ್ಯವಿವಾಹ ಆದರೆ ಅದೇ ಸಮಾಜದ ಅತಿದೊಡ್ಡ ಭೂತ ಅಂದ್ರೆ ಅದು ವರದಕ್ಷಣೆ.
ಮನೆಯ ಬೆಳಕಾಗಿ ಗಂಡಿಗೆ ಆಸರೆಯಾಗಿಮಮನೆಯ ವಂಶ ಬೆಳೆಸಲು ಬರುವ ಹೆಣ್ಣಿಗೆ ವರದಕ್ಷಿಣೆಗಾಗಿ ಬೆಂಕಿಯಿಡುವ ಸಮಾಜ ಗಂಡ ಅತ್ತೆ ಮಾವರು ಅವಳಿಗೆ ಕೊಡದ ಹಿಂಸೆಗಳ ಇಲ್ಲ. ಹಿಂಸೆ ತಾಳದೇ ನೇಣು ಅದಕ್ಕೆ ಶರಣಾಗುವ ಅಥವಾ ವಿಷಯಕ್ಕೆ ನಮಿಸುವ ಮನಸ್ಸು ಹೆಣ್ಣಿನದ್ದು ಆಗಿದೆ . ಅದೇ ಹೆಣ್ಣಿಲ್ಲದೆ ಸಮಾಜದ ಸುಧಾರಣೆ ಅಥವಾ ಬೆಳವಣಿಗೆಯಾಗಲು ಅಥವಾ ಗಂಡಾಗಲಿ ಇರಲು ಸಾಧ್ಯವಿಲ್ಲ ಈ ಸಮಾಜದಲ್ಲಿ ಅವಳಿಗೂ ಕೂಡ ಸ್ಥಾನಮಾನ ಇದೆ. ಅವಳಿಗೂ ಮನಸು ಗುರಿ ಆಸೆ ಕನಸು ಇವೆ ಅದಕ್ಕೆ ಬೆಲೆ ಕೊಡಿ ಅವಳ ಆಸ್ತಿ ಅಂದ ನೋಡಿ ಮದುವೆಯಾಗಿ ಉಪಯೋಗಿಸಿಕೊಂಡು ಚಿತ್ರಹಿಂಸೆ ಕೊಟ್ಟರೆ ನಿಮಗೇನು ಸಿಗುತ್ತದೆ.? ಮೂರ್ಖರೆ ಒಮ್ಮೆ ಯೋಚನೆ ಮಾಡಿ. ನಿಮ್ಮನ್ನು ಎತ್ತವಳು ಸಹ ಒಬ್ಬಳು ಹೆಣ್ಣು ಅದನ್ನ ಮರೆಯಬೇಡಿ. ನೀವುಗಳು ಎಂದರೆ ಗಂಡು ಅವಳು ಇಲ್ಲ ಎಂದರೂ ಇನ್ನೊಬ್ಬಳು ಎನ್ನುತ್ತೀರಾ , ಆದರೆ ಅವಳು ಹೆಣ್ಣು ಅವಳು ನಿಮ್ಮಂತೆ ಯೋಚಿಸಿ ನಿಮ್ಮನ್ನು ಬಿಟ್ಟು ಇನ್ನೊಬ್ಬನ ಕಟ್ಟಿಕೊಂಡರೆ ಅವಳಿಗೆ ವೇಶ್ಯೆ ಎಂಬ ಪಟ್ಟ. ಇದು ನಮ್ಮ ಸಮಾಜ , ಸ್ವಾತಂತ್ರ ರಾಷ್ಟ್ರ .ಇಂದಿನಿಂದ ಆದ್ರೂ ಬದಲಾಗಿ ಅವಳಿಗೆ ನೀವೇ ದಕ್ಷಿಣೆ ಕೊಟ್ಟು ಮದುವೆ ಆಗಬೇಕು , ಯಾಕಂದ್ರೆ ಅವಳು ನಿಮ್ಮ ಜೀವನ ಪೂರ್ತಿ ಜೊತೆಯಾಗಿ ನಿಮ್ಮ ಸಂಸಾರ ಸಾಕುವ ಸಾಹುಕಾರತಿ ಆಗಿರುತ್ತಾಳೆ , ಅವಳ ಮನಸ್ಸು ವಿಶಾಲವಾಗಿರುತ್ತದೆ. ನಿಮ್ಮ ದುಃಖ ಮಾಯ ಮಾಡುವ ಹೆಣ್ಣಿನ ಶಕ್ತಿ ಮತ್ತು ಮನಸ್ಸಿಗೆ ಎಷ್ಟೇ ಹಣ ಕೊಟ್ಟರೂ , ಸಂಸಾರಕ್ಕೆ ಸಂಬಳ ಕೊಟ್ಟರೂ ಸಾಲದು ರೀ.
ಇನ್ನೂ ಕೆಲವರು ಇದ್ದಾರೆ ಬಿಡಿ,! ಅವರ ಬಗ್ಗೆ ಮಾತನಾಡಿ ನಮ್ಮ ಬಾಯಿ , ಲೇಖನಿ ವಲ್ಸಾಗುತ್ತದೆ ಅಂತ ಸುಪ್ನಾತಿಯರು ಇದ್ದಾರೆ .
ಆಕೆ ಸ್ವಲ್ಪ ಇನ್ನು ಮುಂದೆ ನೋಡಿದರೆ ಸಮಾಜದ ಸಾರ್ವಜನಿಕ ಗೋಡೆಗಳು. ನಾನು ಇದರ ಬಗ್ಗೆ ಒಂದು ನೇರವಾದ ಕವಿತೆ ಬರೆದೆ ಅದನ್ನು ಓದಿದ ಪತ್ರಿಕೆಯವರು ಸರ್ ಇದು ನೇರವಾಗಿ ಬರೆದಿದ್ದೀರಾ ಜನ ತಪ್ಪು ತಿಳಿಯುತ್ತಾರೆ ಬೇರೆಅದನ್ನು ಓದಿದ ಪತ್ರಿಕೆಯವರು ಸರ್ ಇದು ನೇರವಾಗಿ ಬರೆದಿದ್ದೀರಾ ಜನ ತಪ್ಪು ತಿಳಿಯುತ್ತಾರೆ ಬೇರೆ ತರ ಬರೆಯಿರಿ ಎಂದು ಹೇಳಿದರು ಅದಕ್ಕೆ ನನ್ನ ಅಭಿಪ್ರಾಯ ತಪ್ಪು ಮಾಡಿದ ಜನರ ತಪ್ಪು ತೋರಿಸುವುದೇ ಆ ಕವಿತೆ ಸರ್ ಅಂದೆ ಆದರೂ ಅದು ಪ್ರಕಟವಾಗಲಿಲ್ಲ ಸ್ವಚ್ಛತೆ ಸ್ವಚ್ಛ ಭಾರತ ಎಂದು ಹೇಳುತ್ತಾರೆ ಆದರೆ ಇವತ್ತು ನಿಮ್ಮ ಮನೆಯೇ ಮನೆಯ ಅಂಗಳವೆ ಸ್ವಚ್ಛವಾಗಿಲ್ಲ ಅದು ಬೇಡ ನಿಮ್ಮ ಮನಸೇ ಸ್ವಚ್ಛವಾಗಿಲ್ಲ ಇನ್ನೂ ಈ ಸಮಾಜ ಸ್ವಚ್ಛವಾಗಿ ಇರುತ್ತಾ ಒಮ್ಮೆ ಯೋಚನೆ ಮಾಡ್ರಿ ಈ ಸಾರ್ವಜನಿಕ ಗೋಡೆಗಳ ಮೇಲೆ ನಿಮ್ಮ ಹೆಸರುಗಳು ಸಿನಿಮಾ ಚಿತ್ರ ಪ್ರೇಮಿಗಳ ಹೆಸರುಗಳು ನಗ್ನ ಚಿತ್ರಗಳು ಹಲ್ಲಿನ ಶಿಲ್ಪ ಗಳಾಗಿವೆ ಇನ್ನ ಮರಗಳನ್ನು ಸಹ ಬಿಟ್ಟಿಲ್ಲ ಆ ಮರಗಳನ್ನು ಸಹ ಕೆತ್ತಿದ್ದಾರೆ ಮರಗಳನ್ನು ಕೆತ್ತಿ ಮರಕ್ಕೆ ಗಾಯ ಮಾಡಿದ್ದಾರೆ ಅವುಗಳನ್ನು ನೋಡಿ ನಮ್ಮ ಕಣ್ಣುಗಳಲ್ಲಿ ಗಾಯವಾಗಿದೆ.
ಕೊನೆಯದಾಗಿ ಒಂದು ಹೇಳ್ತೀನಿ ಕೇಳ್ರಿ ನಿಮ್ಮ ಜನ್ಮಕ್ಕೆ ಯೋಗ್ಯತೆಗೆ ನೀವು ಮನುಷ್ಯರೇ ಆಗಿದ್ದರೆ ಇಂದಿನಿಂದ ಎಲ್ಲಾ ಸಮಸ್ಯೆಗಳ ವಿರುದ್ಧ ಎದ್ದು ನಿಂತು ನಿಮ್ಮ ಮನಸ್ಸು ಬದಲಾಯಿಸಿ, ಸ್ವಚ್ಛಗೊಳಿಸಿ ಶುದ್ಧ ಸಮಾಜ ಬೆಳೆಸಿ. ಸಮಾಜದ ಬದಲಾವಣೆ ಬೆಳವಣಿಗೆಗಾಗಿ ನಿಮ್ಮ ಒಂದು ಕೂಗು( ಧ್ವನಿ) ಆಚೆ ಬರಲಿ. ಹೆಣ್ಣನ್ನು ಪ್ರೀತಿಸಿ ಪ್ರೀತಿಯ ಹೆಸರಲ್ಲಿ ಹಿಂಸಿಸಬೇಡಿ. ಸಮಾಜವನ್ನು ಶುದ್ಧಗೊಳಿಸಿ ಅ ಶುದ್ಧಗೊಳಿಸಬೇಡಿ.
ಅಂಜನ್ ಕುಮಾರ್ ಹನಿ
ಗುಬ್ಬಿ ಕವಿರತ್ನ
ಪುರ . ಹಾಗಲವಾಡಿ ( ಹೊ) ಗುಬ್ಬಿ ( ತಾ) ತುಮಕೂರು( ಜಿ)
7483146697
[email protected]