ಉಡುಪಿ: ಜೂನ್ ೮(ಹಾಯ್ ಉಡುಪಿ ನ್ಯೂಸ್) ಮಾಜಿ ನಗರಸಭಾ ಸದಸ್ಯರೋರ್ವರು ಪ್ರೀತಿಸಿದ ಹೆಣ್ಣನ್ನು ರಿಜಿಸ್ಟರ್ ಮ್ಯಾರೇಜ್ ಆಗುವ ಮೂಲಕ ಆದರ್ಶ ಮೆರೆದ ಘಟನೆ ನಡೆದಿದೆ.
ಉಡುಪಿ ಪೆರಂಪಳ್ಳಿಯ ಯುವ ನಾಯಕ ಎಲ್ಲರ ಪ್ರೀತಿಯ ಚಿಕ್ಕ ನೆಂದೇ ಕರೆಯಲ್ಪಡುವ ಸದಾ ನಗುಮೊಗದ ಮಾಜಿ ನಗರಸಭಾ ಸದಸ್ಯರೋರ್ವರು ತಾನು ಸುದೀರ್ಘ ೭ ವರ್ಷಗಳಿಂದ ಪ್ರೀತಿಸುತ್ತಿದ್ದ ಇನ್ನೊಂದು ಸಮುದಾಯದವಳೆನ್ನಲಾದ ಯುವತಿ ಯನ್ನು ಇಂದು ಶುಭ ಗಳಿಗೆಯಲ್ಲಿ ರಿಜಿಸ್ಟರ್ ಮದುವೆ ಆಗುವ ಮೂಲಕ ಆದರ್ಶ ಮೆರೆದಿದ್ದಾರೆ. ಆಪ್ತ ಗೆಳೆಯರ ಸಮ್ಮುಖದಲ್ಲಿ ವಿವಾಹ ವಾದ ಪ್ರೇಮಿ ಗಳ ಕುಟುಂಬ ಸದಸ್ಯರು ಯಾರೂ ಸಾಕ್ಷಿ ಯಾಗಿರಲಿಲ್ಲ ಎನ್ನಲಾಗಿದೆ.
ಓರ್ವ ಆದರ್ಶ ಸಮಾಜ ಸೇವಕನಾಗಿರುವ , ಯಶಸ್ವಿ, ಜನಾನುರಾಗಿ ಯುವನಾಯಕನ ಈ ಪ್ರೇಮ ವಿವಾಹಕ್ಕೆ ಯಾರೂ ಅಪಸ್ವರ ಎತ್ತದೆ ನವ ವಧುವರರಿಗೆ ಶುಭಾಶಯಗಳನ್ನು ಕೋರೋಣ.