ಬೈಂದೂರು: ಜೂನ್ ೮(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಅವರು ದಿನಾಂಕ 30/05/2022 ರಂದು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರೂರು ಗ್ರಾಮದ ಆರ್ಮೆ ಕರಿಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒರ್ವ ವ್ಯಕ್ತಿಯು ಅಮಲು ಪದಾರ್ಥ ಸೇವನೆ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಂತೆ ಕೂಡಲೆ ಶಿರೂರು ಗ್ರಾಮದ ಆರ್ಮೆ ಕರಿಕಟ್ಟೆ ಬಳಿಯ ಸಾರ್ವಜನಿಕ ಸ್ಥಳಕ್ಕೆ 11:30 ಗಂಟೆಗೆ ಹೋದಾಗ ಅಲ್ಲಿ ಒಬ್ಬ ಯುವಕನು ತೂರಾಡಿಕೊಂಡು ಅಮಲಿನಲ್ಲಿರುವುದನ್ನು ಕಂಡು ಆತನ ಬಳಿ ಹೋಗಿ ಆತನ ಹೆಸರು ಕೇಳಿದಾಗ ತೊದಲುತ್ತಾ ಮಾಮ್ದು ಪುರ್ಕಾನ್ ಎಂಬುದಾಗಿ ಹೇಳಿದ್ದು ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಯಾವುದೋ ಮಾಧಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಮಾಮ್ದು ಪುರ್ಕಾನ್ (23) ಶಿರೂರು ಮಾರ್ಕೆಟ್, 10 ನೇ ವಾರ್ಡ್ ನಿವಾಸಿಯೆಂದು ತಿಳಿಸಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಆತ ಗಾಂಜಾ ಸೇವನೆ ಮಾಡಿರುವುದು ಧ್ರಡವಾದ ಕಾರಣ ಆತನ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.