IMG_20260913_200341.png
Spread the love

ಉಡುಪಿ: ದಿನಾಂಕ:13-09-2026(ಹಾಯ್ ಉಡುಪಿ ನ್ಯೂಸ್) ಮದುವೆಯ ಸಂದರ್ಭದಲ್ಲಿ ಯುವಕನ ಗಂಭೀರ ಅನಾರೋಗ್ಯ ವನ್ನು ಮರೆಮಾಚಿ ಮದುವೆ ಮಾಡಿ ಇದೀಗ ಮಾನಸಿಕವಾಗಿ ಹಿಂಸೆ ನೀಡಿ ಚಿನ್ನಾಭರಣವನ್ನು ನೀಡದೆ ಇರುವ ಬಗ್ಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ತಾಲೂಕು ಸಂತೆಕಟ್ಟೆ ನಿವಾಸಿ ಮೆಹೆನಾಜ್‌ (27) ಎಂಬವರ ವಿವಾಹವು 1 ನೇ ಆರೋಪಿತ  ತಾಹಾ ಸಯ್ಯದ್‌ ರಫೀಕ್‌ ಎಂಬವರೊಂದಿಗೆ ದಿನಾಂಕ: 06/07/2024 ರಂದು ಉಡುಪಿ ಜಾಮೀಯಾ ಮಸೀದಿಯಲ್ಲಿ ನಡೆದಿದ್ದು ಮದುವೆಯ ಸಮಯದಲ್ಲಿ ಮೆಹೆನಾಜ್ ರವರ ಹೆತ್ತವರು 300 ಗ್ರಾಂ ಕ್ಕಿಂತ ಹೆಚ್ಚು ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿ ವಿವಾಹದ ಎಲ್ಲಾ ಖರ್ಚು  10ಲಕ್ಷ ರೂಪಾಯಿಗಿಂತ ಹೆಚ್ಚು ಮೆಹೆನಾಜ್ ರ ಮನೆಯವರೇ  ಭರಿಸಿರುತ್ತಾರೆ ಮತ್ತು 56 ಗ್ರಾಂ ಚಿನ್ನ ಮೆಹರ್‌ ರೂಪದಲ್ಲಿ  ಮೆಹೆನಾಜ್ ರಿಗೆ  ದೊರೆತಿರುತ್ತದೆ.

1 ನೇ ಆರೋಪಿತ ಗಂಡ ತಾಹಾ ಸೈಯ್ಯದ್ ರಫೀಕ್ ನಿಗೆ  ಅನಾರೋಗ್ಯ ಇರುವುದನ್ನು ಮರೆಮಾಚಿದ್ದು 2 ನೇ ಆರೋಪಿತೆ ಡಾ ಅರ್ಷಿಯಾ ವೈಧ್ಯರಾಗಿದ್ದು ರೋಗದ ನಿಜವಾದ ಸ್ವರೂಪ ತಿಳಿದಿದ್ದರೂ ಸಹ ಮೆಹೆನಾಜ್ ರಿಗೆ ಮತ್ತು ಅವರ ಕುಟುಂಬಕ್ಕೆ ತಿಳಿಸದೆ ಮರೆಮಾಚಿದ್ದರು.

ಮೆಹೆನಾಜ್ ರಿಂದ  1ನೇ ಆರೋಪಿತ ತಾಹಾ ಸೈಯ್ಯದ್ ರಫೀಕ್ ಎಲ್ಲಾ ಮನೆಕೆಲಸ ಅಡುಗೆ ಬಟ್ಟೆ ಒಗೆಯುವುದು  ಮಾಡಿಸುತ್ತಿದ್ದು 3 ನೇ ಆಪಾದಿತೆ ಸಾರಾ ಅಸಾದಿ  ಮೆಹೆನಾಜ್ ರಿಗೆ ಪದೇ ಪದೇ ಅವಮಾನಿಸಿ  ಬೆಂಬಲ ನೀಡುತ್ತಿದ್ದರು. ಮೆಹೆನಾಜ್ ರ ವೈಯಕ್ತಿಕ ವಸ್ತುಗಳು ಮತ್ತು ಜಂಟಿ ಬ್ಯಾಂಕ್‌ ಲಾಕರ್‌ ನಲ್ಲಿದ್ದ ಚಿನ್ನಾಭರಣಗಳನ್ನು  ಮೆಹೆನಾಜ್ ರು ಪಡೆಯಲು ಹೋದಾಗ  ಲಾಕರ್‌ ಕೀಲಿಗಳನ್ನು 4 ನೇ ಆಪಾದಿತ ಸಯ್ಯದ್‌ ರಫೀಕ್‌  ತನ್ನಲ್ಲಿಯೇ ಇಟ್ಟುಕೊಂಡು ಕೊಡಲು ನಿರಾಕರಿಸಿ  ತನ್ನ ನಿಯಂತ್ರಣದಲ್ಲಿಯೇ ಇಟ್ಟುಕೊಂಡು ಉಳಿದ ಆಪಾದಿತರಿಗೆ ಅ ಕ್ರತ್ಯಗಳಿಗೆ ಸಂಪೂರ್ಣವಾಗಿ ಬೆಂಬಲವನ್ನು ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೆಹೆನಾಜ್ ತಿಳಿಸಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 61/2026 ಕಲಂ:  85, 272 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!