file_00000000fc8881f88489c64914276e5e.png
Spread the love

ಶಿರ್ವ: ದಿನಾಂಕ:13-09-2026 (ಹಾಯ್ ಉಡುಪಿ ನ್ಯೂಸ್) ಬೆಳಪು ಗ್ರಾಮದ ದೇವಸ್ಥಾನವೊಂದರಲ್ಲಿ ಕಳ್ಳತನ ನಡೆದಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಪು ತಾಲೂಕು ಬೆಳಪು ಗ್ರಾಮದ ನಿವಾಸಿ ಪ್ರಕಾಶ್‌ ರಾವ್‌ (50)  ಎಂಬವರು ಬೆಳಪು ಗ್ರಾಮದ ಬ್ರಹ್ಮಲಿಂಗೇಶ್ವರ ಮತ್ತು ಖಡ್ಗೇಶ್ವರಿ ದೇವಸ್ಥಾನದ ಅಧ್ಯಕ್ಷರಾಗಿರುತ್ತಾರೆ. ದಿನಾಂಕ 25-08-2026 ರಂದು ಬೆಳಿಗ್ಗೆ7:30 ಗಂಟೆಗೆ ಗಣೇಶ್‌ ದೇವಾಡಿಗರವರು ದೇವಸ್ಥಾನದ ಎದುರಿನ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿ ಇದ್ದುದನ್ನು ನೋಡಿ ದೇವಸ್ಥಾನದ ಕಾರ್ಯದರ್ಶಿಯವರಿಗೆ ತಿಳಿಸಿರುತ್ತಾರೆ. ಕಾರ್ಯದರ್ಶಿಯವರು  ಪ್ರಕಾಶ್ ರಾವ್ ರವರಿಗೆ ತಿಳಿಸಿದ್ದು  ಅಲ್ಲಿಂದ ದೇವಸ್ಥಾನಕ್ಕೆ ಪ್ರಕಾಶ್ ರಾವ್ ರವರು ಹೋಗಿ ನೋಡಿದಾಗ ಯಾರೋ ಕಳ್ಳರು ದೇವಸ್ಥಾನದ ಎದುರಿನ ಬಾಗಿಲಿನ ಚಿಲಕ ವನ್ನು ಮುರಿದು ಒಳ ಪ್ರವೇಶಿಸಿ ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದು ಗರ್ಭಗುಡಿಯ ಒಳಗಡೆ ಇದ್ದ ಎರಡು  ದೇವರ ಮೂರ್ತಿಗೆ ತೊಡಿಸಿದ್ದ ಬೆಳ್ಳಿಯ ಮುಖವಾಡಗಳನ್ನು ಹಾಗೂ   ದೇವಸ್ಥಾನದ ಒಳಗಿನ ಪ್ರಾಂಗಣದಲ್ಲಿದ್ದ ಕಾಣಿಕೆ ಡಬ್ಬಿಯ ಬೀಗವನ್ನು ಮುರಿದು ಅದರ ಒಳಗಡೆ ಇದ್ದ ನಗದು ಹಣವನ್ನು ಕಳವು ಮಾಡಿ ಕೊಂಡು ಹೋಗಿರುವುದು ಕಂಡುಬಂದಿರುತ್ತದೆ.

ದಿನಾಂಕ 24-08-2026 ರ ಸಂಜೆ 6-30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಬೀಗ ಹಾಕಿ ಭದ್ರಪಡಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳುವಾದ  ಬೆಳ್ಳಿಮುಖವಾಡಗಳ ಅಂದಾಜು ಮೌಲ್ಯ 1,30,000 ಆಗಿದ್ದು ನಗದು ಹಣದ ನಿಖರ ಮಾಹಿತಿ ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಶಿರ್ವ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 73/2026   ಕಲಂ: 305, 331 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!