ಬಿಲ್ಲವರ ಸೇವಾ ಸಂಘ ಉಡುಪಿ (ರಿ.) ಬನ್ನಂಜೆ ಹಾಗೂ ಶ್ರೀ ನಾರಾಯಣಗುರು ವಿದ್ಯಾನಿಧಿ ಟ್ರಸ್ಟ್ ಬನ್ನಂಜೆ ಇದರ ವತಿಯಿಂದ 2021-22ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ತೇಗ೯ಡೆಯಾದ ಶೇಕಡಾ 80ಕ್ಕಿಂತ ಹೆಚ್ಚುವರಿ ಅಂಕ ಪಡೆದಿರುವ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ ಬಿಲ್ಲವ ಸಮಾಜದ ಬಡ ವಿದ್ಯಾಥಿ೯ಗಳಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾಥಿ೯ವೇತನ ಅಜಿ೯ಯನ್ನು ಆಹ್ವಾನಿಸಲಾಗಿದೆ. ಅಜಿ೯ಯನ್ನು ಸಂಘದ ಕಾಯಾ೯ಲಯದಲ್ಲಿ ತಾ 06.06.2022 ರಿಂದ ತಾ. 15.06.2022 ರ ಒಳಗೆ ಪಡೆದುಕೊಂಡು ಭತಿ೯ ಮಾಡಿದ ಅಜಿ೯ಯನ್ನು ತಾ 16.06.2022 ರಿಂದ ತಾ.30.06.2022 ರ ಒಳಗೆ ಸಂಘಕ್ಕೆ ಹಿಂತಿರುಗಿಸಬೇಕಾಗಿ ಕೋರಲಾಗಿದೆ.
ಅರ್ಜಿ ಪಡೆಯುವ ಹಾಗೂ ನೀಡುವ ಸಮಯ ಸಾಯಂಕಾಲ ಗಂಟೆ 3-00 ರಿಂದ ಸಾಯಂಕಾಲ ಗಂಟೆ 5-00 ರವರೆಗೆ ಮಾತ್ರ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.