IMG-20250108-WA0025.jpg
Spread the love

ಬ್ರಹ್ಮಾವರ: ದಿನಾಂಕ: 26-08-2026(ಹಾಯ್ ಉಡುಪಿ ನ್ಯೂಸ್) ಹನ್ನೆರಡು ಜನರ ತಂಡವೊಂದು ಗರ್ಭವತಿ ಮಹಿಳೆಯೋರ್ವರು ವಾಸವಾಗಿರುವ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿ ಹೋಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 23/08/2026 ರಂದು ಬೆಳಿಗ್ಗೆ 11:30 ರಿಂದ 12:00 ಗಂಟೆಗೆ ಆರೋಪಿತರಾದ 4 ಜನ ಅಪರಿಚಿತ ವ್ಯಕ್ತಿಗಳು ಹಾಗೂ ಶ್ಯಾಮ ನಾಯ್ಕ, ನಂದಕಿಶೋರ, ರಾಜೇಶ ನಾಯ್ಕ, ಕೃಷ್ಣ ನಾಯ್ಕ, ವಸಂತಿ, ಬಾಬಿ, ಸುಮತಿ, ವಂದನ ಎಂಬವರುಗಳು ಪಿಣಿಯ ನಾಯ್ಕರವರ ಪಿತೂರಿ ಮೇರೆಗೆ  ಬ್ರಹ್ಮಾವರ,ಕಾಡೂರು ಗ್ರಾಮದ ನಿವಾಸಿ ವೀಣಾ (32)  ಇವರ ಮನೆಗೆ ಬಂದು ಗರ್ಭವತಿಯಾದ ವೀಣಾ ರವರಿಗೆ ಹಲ್ಲೆ ನಡೆಸಿದ್ದು, ಅಲ್ಲದೇ ಅಪರಿಚಿತ ವ್ಯಕ್ತಿಗಳು ನಿಂದನೆ ಮಾಡಿರುತ್ತಾರೆ.

ಅಲ್ಲದೇ ಮನೆಯ ಸಿಸಿಟಿವಿ ಕ್ಯಾಮರ, ಮನೆಯ ಕಿಟಕಿ ಗಾಜು ಹಾನಿ ಮಾಡಿ, ಮನೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ. ವೀಣಾ ರವರ ಮೈದುನನ ಹೆಂಡತಿ ಚಂದ್ರವತಿ ಯವರಿಗೂ ಕೂಡ ಕಲ್ಲು ಮತ್ತು ಎಳ ನೀರು ಸಿಪ್ಪೆಯಿಂದ ಹಲ್ಲೆ ನಡೆಸಿ, ಮನೆಯ ಸಾಕು ನಾಯಿಗೂ ಕೂಡ ಹೊಡೆದು ತಾವು ಬಂದ ವಾಹನಗಳಲ್ಲಿ ವಾಪಾಸ್ಸು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವೀಣಾ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 164/2026 ಕಲಂ: 115(2), 118(1), 189(2), 191(2), 191(3), 324(4), 329(4), 351(2), 352, 49, 74 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!