ದಿನಾಂಕ:26-08-2026(ಹಾಯ್ ಉಡುಪಿ ನ್ಯೂಸ್)
ಕುಂದಾಪುರ : ಗಂಗೊಳ್ಳಿ ಧಕ್ಕೆಯಿಂದ ಮಧ್ಯಾಹ್ನದ ಬಳಿಕ ಮೀನುಗಾರಿಕೆಗೆ ತೆರಳಿದ್ದ ಶ್ರೀ ಬಾಲಾಂಜನೇಯ ಹೆಸರಿನ ಪರ್ಸಿನ್ ಮೀನುಗಾರಿಕಾ ಬೋಟೊಂದು ಧಕ್ಕೆಯ ಅನತಿ ದೂರದಲ್ಲಿ ಅಳಿವೆಯ ಸಮೀಪವೇ ಮುಳುಗಡೆಯಾಗಿದೆ. ಕೂಡಲೇ ಕಾರ್ಯಚರಣೆಗೆ ಇಳಿದ ಸಮೀಪದಲ್ಲಿದ್ದ ಬೋಟುಗಳ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿಗಳು ಬೋಟಿನಲ್ಲಿದ್ದ 27 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಬೋಟಿನ ತಳಭಾಗದ ಹಲಗೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದು ಬೋಟು ತ್ವರಿತವಾಗಿ ಮುಳುಗಲು ಕಾರಣವೆನ್ನಲಾಗಿದೆ.ಅವಘಡದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
