ಬೈಂದೂರು: ದಿನಾಂಕ:26-08-2026(ಹಾಯ್ ಉಡುಪಿ ನ್ಯೂಸ್) ಸಮುದಾಯ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ವಾಹನಕ್ಕೆ ವ್ಯಕ್ತಿ ಯೋರ್ವರು ಕಲ್ಲಿನಿಂದ ಹೊಡೆದು ಜಖಂ ಗೊಳಿಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿನಾಂಕ: 24-08-2026 ರಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಸರಕಾರಿ ಅಂಬುಲೆನ್ಸ ವಾಹನ ಸಂಖ್ಯೆ ಕೆ ಎ 20 ಜಿ 0686ನೇದರಲ್ಲಿ ಅದರ ಚಾಲಕ ಬಿ ಮೊಹಮ್ಮದ್ ಹುಸೈನ್ ಎಂಬುವವರು ಓರ್ವ ರೋಗಿಯನ್ನು ಬೈಂದೂರು ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ರೋಗಿಯನ್ನು ಚಿಕಿತ್ಸೆಯ ಬಗ್ಗೆ ಬಿಟ್ಟು, ಅಲ್ಲಿಂದ ವಾಪಾಸ್ಸು ರಾ.ಹೆ 66 ರಲ್ಲಿ ಬರುತ್ತಿರುವಾಗ ಸಂಜೆ ಸುಮಾರು 04:50 ಗಂಟೆಗೆ ಉಪ್ಪುಂದ ಗ್ರಾಮದ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನ ಮುಖ ಮಂಟಪದ ಬಳಿ ಬರುವಾಗ ರಾಘವೆಂದ್ರ ಎಂಬುವವರು ಅಂಬುಲೆನ್ಸ್ ವಾಹನಕ್ಕೆ ಒಂದು ಕಲ್ಲಿನಿಂದ ಹೊಡೆದಿದ್ದು, ಪರಿಣಾಮ ಅಂಬುಲೆನ್ಸ್ ವಾಹನದ ಎದುರಿನ ಗ್ಲಾಸ್ ಜಖಂಗೊಂಡಿರುತ್ತದೆ.
ಇದರಿಂದ ಸುಮಾರು 15,000/- ರೂಪಾಯಿ ನಷ್ಟ ಉಂಟಾಗಿರುತ್ತದೆ ಎಂದು ಈ ಬಗ್ಗೆ ಪ್ರೇಮಾನಂದ ಕೆ (55)ಆಢಳಿತ ವೈದ್ಯಾದಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಗ್ರಾಮ ಇವರು ಪೊಲೀಸರಿಗೆ ದೂರು ನೀಡಿದ್ದಾರೆ .
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:111/2026 ಕಲಂ 324(3) BNS ಹಾಗೂ 3 PDLP ACT ರಂತೆ ಪ್ರಕರಣ ದಾಖಲಾಗಿದೆ.
