ಮಣಿಪಾಲ: ದಿನಾಂಕ:19-08-2026(ಹಾಯ್ ಉಡುಪಿ ನ್ಯೂಸ್) ಅಮೆಜಾನ್ ಫ್ರಾಂಚೈಸಿ ದೊರಕಿಸಿ ಕೊಡುವುದಾಗಿ ನಂಬಿಸಿ ವ್ಯಕ್ತಿ ಯೋರ್ವರಿಗೆ 4.20 ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ,ನಾಲ್ಕೂರು ಗ್ರಾಮದ ನಿವಾಸಿ ರವಿಚಂದ್ರ (48) ಎಂಬವರಿಗೆ ದಿನಾಂಕ 29/06/2026 ರಂದು ಎಮ್ ಸಾಯಿಕೃಷ್ಣ ಎಂಬುವವರು ಕರೆ ಮಾಡಿ ತಾನು ಅಮೆಜಾನ್ ಕಂಪನಿಯ ಆನ್ ಲೈನ್ ಹಬ್ ಪ್ರಾಂಚಸಿಯನ್ನು ಉಡುಪಿ ಮಣಿಪಾಲ ಅಲೆವೂರು ರಸ್ತೆಯಲ್ಲಿರುವ ಬಾಳಿಗಾ ಕಾಂಪ್ಲೆಕ್ಸ್ ನಲ್ಲಿ ಮಾಡಿಸಿಕೊಡುವುದಾಗಿ ಹೇಳಿದಾಗ ರವಿಚಂದ್ರ ರವರು ಆನ್ ಲೈನ್ ಪ್ರಾಂಚಸಿ ಬೇಡವೆಂದು ಹೇಳಿ ಕರೆಯನ್ನು ಕಡಿತಗೊಳಿಸಿರುತ್ತಾರೆ.
ನಂತರ ಪುನಃ ರವಿಚಂದ್ರ ರವರ ಮೊಬೈಲ್ ನಂಬರಿಗೆ ಕರೆ ಮಾಡಿ ಪ್ರಾರಂಭದಲ್ಲಿ ರಿಜಿಸ್ಟ್ರೇಶನ್ ಮಾತ್ರ ಆನ್ ಲೈನ್ ನಲ್ಲಿ ಮಾಡಿಕೊಳ್ಳ ಬೇಕು ತಮ್ಮ ಕಂಪನಿಯ ಪೀಲ್ಡ್ ಆಫೀಸರ್ ನವರು ಸ್ಥಳಕ್ಕೆ ಬೇಟಿ ನೀಡಿ ಕಂಪನಿಯೊಂದಿಗೆ ಒಪ್ಪಂದ ಮತ್ತು ಏರಿಯಾ ಪಿನ್ ಕೋಡ್ ಲಾಕಿಂಗ್ ಮಾಡಿಕೊಡುತ್ತಾರೆ ಎಂದು ತಿಳಿಸಿ ಪೀಲ್ಡ್ ಆಫೀಸರ್ ಎಂದು ತಿಳಿಸಿ 1.ಎಮ್ ಸಾಯಿಕೃಷ್ಣ, 2. ಎಮ್ ಗುರುಸ್ವಾಮಿ, 3.ಸುರೇಶ್ ಕುಮಾರ್, 4. ರಾಜ್ ಕುಮಾರ್ ಮತ್ತು 5.ಮಹೇಶ್ ಇವರು ಸೇರಿ ಡೆಲಿವರಿ ಹಬ್ ಪ್ರಾಂಚಸಿಯನ್ನು ಉಡುಪಿ ಮಣಿಪಾಲದಲ್ಲಿ ಮಾಡಿಕೊಡುವುದಾಗಿ ಹೇಳಿ ರವಿಚಂದ್ರ ರಿಂದ ಹಂತ ಹಂತವಾಗಿ 4,20,000/- ಹಣವನ್ನು ವರ್ಗಾವಣೆ ಮಾಡಿಕೊಂಡು ನಂಬಿಸಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರವಿಚಂದ್ರ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:316(1),316(2),318(1),318(2),318(3),318(4),319 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
