deccanherald_import_sites_dh_files_article_images_2011_11_28_police.jpg
Spread the love

ಅಮಾಸೆಬೈಲು: ದಿನಾಂಕ:19-08-2026(ಹಾಯ್ ಉಡುಪಿ ನ್ಯೂಸ್) ಶೇಡಿ ಮನೆ ನಿವಾಸಿ ರಾಜೀವ ಶೆಟ್ಟಿ (55)ಎಂಬವರ ಕಾರನ್ನು ಮಾರಾಟ ಮಾಡಿ ಕೊಡುವುದಾಗಿ ನಂಬಿಸಿ ಅವಿಚರಣ ನಾಯ್ಕ ಎಂಬವ ವಂಚನೆ ನಡೆಸಿರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶೇಡಿಮನೆ ಗ್ರಾಮದ ನಿವಾಸಿ ರಾಜೀವ ಶೆಟ್ಟಿ ಇವರು KA-20-MA-3371 ನಂಬರಿನ i20 Hundai ಕಾರಿನ ಮಾಲೀಕರಾಗಿದ್ದು, ಕಾರನ್ನು ಮಾರಾಟ ಮಾಡುವ ಬಗ್ಗೆ ಗಿರಾಕಿಗಳನ್ನು ಹುಡುಕುತ್ತಿರುವಾಗ ನೆರೆಕೆರೆ ನಿವಾಸಿ ಅಪಾದಿತ 1 ನೇ ಅವಿಚರಣ್‌ ನಾಯ್ಕ , ಮಾಯ ಬಜಾರ ಶೇಡಿಮನೆ ಗ್ರಾಮ ಎಂಬಾತ ಕಾರಿನ ಮಾರಾಟದ ಬಗ್ಗೆ 2 ನೇ ಅಪಾದಿತ ಜಯಂತ್‌ ಪುತ್ರನ್, ಕೋಟ ಕುಂದಾಪುರ ಎಂಬಾತ ನೊಂದಿಗೆ ಸೇರಿಕೊಂಡು ವಾಹನಗಳ ಮಾರಾಟದ ದಲ್ಲಾಳಿ ಕೆಲಸ ಮಾಡಿಕೊಂಡು ಬರುತ್ತೇವೆ ಎಂದು ನಿಮ್ಮ ಕಾರಿನ ವಾಹನ ಪರೀಕ್ಷೆ ಹಾಗೂ ವಾಹನದ ಶೋ ರೋಮ್‌ ನಲ್ಲಿ ತೋರಿಸಲು ಮತ್ತು ವಾಹನದ ಮೌಲ್ಯ ಮಾಪನ ಮಾಡಲು ಇದೆ ಎಂದು ದಿನಾಂಕ 26/02/2026 ರಂದು ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಅಗಳಿ ಬೈಲಿನಲ್ಲಿ ಇರುವ ರಾಜೀವ ಶೆಟ್ಟಿ ರವರ ಮನೆಗೆ ಬಂದು ಅಪಾದಿತ 1ನೇ ಅವಿಚರಣ್ ನಾಯ್ಕ  ಕಾರನ್ನು ಚಾಲಾಯಿಸಿಕೊಂಡು ಹೋಗಿರುತ್ತಾನೆ. ನಂತರ ಕಾರಿನ ಬಗ್ಗೆ ವಿಚಾರಿಸಿದಾಗ ಕಾರು ಕುಂದಾಪುರದ ಶೋ ರೂಮ್‌ ನಲ್ಲಿ ಇದೆ ಸ್ಪಲ್ಪ ರಿಪೇರಿ ಇದೆ ಎಂದು ಹೇಳಿರುತ್ತಾನೆ. ನಂತರ ಕೇಳಿದಾಗ ಕಾರು ರಿಪೇರಿ ಆಗಿದೆ ತಂದು ಕೊಡುತ್ತೇನೆ ಅಥವಾ ಮಾರಾಟ ಮಾಡಿ ಹಣ ತಂದು ಕೊಡುತ್ತೇನೆ ಎಂದು ಹೇಳಿದ್ದು ತದನಂತರ ಕೇಳಿದಾಗ 2ನೇ ಅಪಾದಿತನಿಗೆ ಮಾರಾಟ ಮಾಡಿರುತ್ತೇನೆ ಎಂದು ಹೇಳಿರುತ್ತಾನೆ. ಹೀಗೆ ಹೇಳುತ್ತಾ 1ನೇ ಮತ್ತು 2ನೇ ಅಪಾದಿತರು ಕಾರನ್ನು ದಿನಾಂಕ 08/08/2026ರ ವರೆಗೂ ಹಿಂದಿರುಗಿಸದೆ ಹಣವನ್ನು ನೀಡದೆ ರಾಜೀವ ಶೆಟ್ಟರನ್ನು ನಂಬಿಸಿ ಕಾರಿನ ಸಾಲದ ಕಂತನ್ನು ಪಾವಿತಿಸದೆ ಮೋಸ ಮತ್ತು ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಾಜೀವ ಶೆಟ್ಟಿ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ  ಕಲಂ: 316(2), 318(2), 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!