IMG_20260806_182451.jpg
Spread the love

ಉಡುಪಿ: ದಿನಾಂಕ: 06-08-2026(ಹಾಯ್ ಉಡುಪಿ ನ್ಯೂಸ್) ರೈಲ್ವೆ ಗುತ್ತಿಗೆದಾರರೋರ್ವರು ಉಪ ಗುತ್ತಿಗೆ ದಾರನಿಗೆ 95ಲಕ್ಷ ರೂಪಾಯಿ ವಂಚಿಸಿದ್ದಾರೆಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಕನ್ನರಪಾಡಿ ನಿವಾಸಿ ಹೃಷಿಕೇಶ್‌ ಜೆ ಶೆಟ್ಟಿ ಎಂಬವರು ಗುತ್ತಿಗೆದಾರರಾಗಿದ್ದು ಅವರಿಗೆ ಪಿ ರಾಮಚಂದ್ರ ಎಂಬವರು ಉಡುಪಿ ಇಂದ್ರಾಳಿಯಲ್ಲಿರುವ ರೈಲ್ವೆ ಗುತ್ತಿಗೆದಾರರಾದ ಕುಶಾಲ್‌ ಶೆಟ್ಟಿ ಅವರ ಕಚೇರಿಯಲ್ಲಿ ಭೇಟಿಯಾಗಿದ್ದು . ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ನಿಂದ ಶ್ರೀ ಪಿ ರಾಮಚಂದ್ರ ಅವರಿಗೆ ಕುಮಟಾ ಮತ್ತು ಗೋಕರ್ಣ ರೈಲ್ವೆ ಕಾಮಗಾರಿ ಮಂಜೂರಾಗಿದ್ದು ಆ ಕಾಮಗಾರಿಗಳನ್ನು ಪಿ ರಾಮಚಂದ್ರರವರು ಗುತ್ತಿಗೆ ಉಪಗುತ್ತಿಗೆ ಅಧಾರದ ಮೇಲೆ ಹ್ರಷಿಕೇಶ್ ಜೆ ಶೆಟ್ಟಿ ರವರಿಗೆ ನೀಡಿದ್ದು ಹ್ರಷಿಕೇಶ್ ಜೆ ಶೆಟ್ಟಿ ರವರು ಕಾಮಾಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ರಾಮ ಚಂದ್ರರವರು ಹಣವನ್ನು ಒಪ್ಪಂದದ ಪ್ರಕಾರ ಪಾವತಿಸುವುದಾಗಿ ಭರವಸೆ ನೀಡಿದ್ದರು .

ಹ್ರಷಿಕೇಶ್ ಜೆ ಶೆಟ್ಟಿ ಯವರು ಅವರ ಭರವಸೆ ಮತ್ತು ನೀಡಿದ ಮಾತಿನ ಮೇಲೆ ನಂಬಿಕೆ ಇಟ್ಟು ಒಪ್ಪಂದಕ್ಕೆ ಸಹಿ ಹಾಕಿ ಎಲ್ಲಾ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿ ವಕೀಲರ ಮೂಲಕ ದಾಖಲೆಗಳನ್ನು ಸಿದ್ದಪಡಿಸಿ ಅಕ್ಟೋಬರ್ 2025 ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದರು . ಕುಮಟಾ ಹಾಗು ಗೋಕರ್ಣ ಕಾಮಗಾರಿಗಳು ಪ್ರಗತಿಯಲ್ಲಿದ್ದ ಸಂದರ್ಭದಲ್ಲಿ ಗೋಕರ್ಣ ರೈಲ್ವೆ ನಿಲ್ದಾಣ ಮತ್ತು ಮಡ್ಗಾಂ ರಬ್ಬ್ರೈಸ್ಡ್ ಲೆವೆಲ್ ಕ್ರಾಸಿಂಗ್ ಪ್ಯಾಡ್ಗಳ ಹೆಚ್ಚುವರಿ ಕಾಮಾಗಾರಿಗಳನ್ನು ಸಹ ನೀಡಿರುತ್ತಾರೆ. ಹ್ರಷಿಕೇಶ್ ಜೆ ಶೆಟ್ಟಿ ಯವರು ಸ್ವಂತ ಹಣ ಕಾರ್ಮಿಕರನ್ನು ,ಯಂತ್ರೋಪಕರಣಗಳನ್ನು ಸಾಮಗ್ರಿಗಳು ಹಾಗೂ ಇತರ ಸಂಪನ್ಮೂಲಗಳನ್ನು ಬಳಸಿಕೊಂಡು ಕಾಮಾಗಾರಿಯನ್ನು ಪೂರ್ಣಗೊಳಿಸಿದ್ದು ಪಿ ರಾಮಚಂದ್ರರವರು ಒಪ್ಪಂದದಂತೆ ಹಣ ಕೊಡುವುದಾಗಿ ನಂಬಿಸಿ ಕಾಮಗಾರಿ ಮುಗಿದ ಬಳಿಕ ಹ್ರಷಿಕೇಶ್ ಜೆ ಶೆಟ್ಟಿ ರವರಿಗೆ ಕೊಡಬೇಕಾದ 94,81,554/- ರೂಪಾಯಿ ಕೊಡಲು ಬಾಕಿ ಇದ್ದು ಹ್ರಷಿಕೇಶ್ ಜೆ ಶೆಟ್ಟಿ ರವರು ಪದೆ ಪದೆ ವಿನಂತಿಸಿದರು ಉದ್ದೇಶ ಪೂರ್ವಕವಾಗಿ ನ್ಯಾಯಾಯುತವಾಗಿ ಬರಬೇಕಾದ ಹಣವನ್ನು ಪಾವತಿಸದೆ ಅರ್ಥಿಕ ನಷ್ಟ ಉಂಟುಮಾಡಿ ಮೋಸ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹ್ರಷಿಕೇಶ್ ಜೆ ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 318, 316 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!