IMG_20260719_200243.jpg
Spread the love

ಉಡುಪಿ:  ದಿನಾಂಕ:19-07-2026(ಹಾಯ್ ಉಡುಪಿ ನ್ಯೂಸ್) ಡಿಜಿಟಲ್ ಎರೆಸ್ಟ್ ಎಂದು ವಾಟ್ಸಪ್ ಕರೆ ಮಾಡಿ ಬೆದರಿಸಿ ವ್ಯಕ್ತಿ ಯೋರ್ವರಿಗೆ 9.29 ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಾಸುದೇವ ಪ್ರಭು (76) ಎಂಬವರು‌ ಕೆನರಾ ಬ್ಯಾಂಕ್‌ ಖಾತೆ ಹೊಂದಿದ್ದು ದಿನಾಂಕ: 02/07/2026 ರಂದು 29,000/- ಡಿಜಿಟಲ್‌ ಅರೆಸ್ಟ್‌ ಎಂಬುದಾಗಿ ವಾಟ್ಸ್ ಪ್‌ ಕರೆ ಮಾಡಿ ವಾಸುದೇವ ಪ್ರಭುರವರ ಹೆಸರಿನಲ್ಲಿ ಇನ್ನೊಂದು ಖಾತೆಯನ್ನು ತೆರೆದು ಅದರಲ್ಲಿ 2 ಕೋಟಿ ರೂ ಮನಿ ಲಾಂಡರಿಂಗ್‌ ಆಗಿದ್ದು ಈ ಬಗ್ಗೆ ಇಡಿ ಕೇಸ್‌ ಆಗಿದ್ದು ಈ ವಿಷಯದಲ್ಲಿ ಅದೇ ದಿನ 4:30 ಗಂಟೆಗೆ ಒಳಗೆ ಬಂದು ಅರೆಸ್ಟ್‌ ಮಾಡುವುದಾಗಿ ಬೆದರಿಕೆ ಹಾಕಿ ಮುಂಬಾಯಿಗೆ ಕರೆದುಕೊಂಡು ಹೋಗಿ 45 ದಿನಗಳ ಪೊಲೀಸ್‌ ಕಸ್ಟಡಿ ಇಡುತ್ತೇವೆ ಎಂದು ಬೆದರಿಕೆ ಹಾಕಿದ್ದು ಇದರಿಂದ ವಾಸುದೇವ ಪ್ರಭುರವರು ಹೆದರಿ ಅಪರಿಚಿತ ವ್ಯಕ್ತಿಯ ಖಾತೆಗೆ ಒಟ್ಟು 9,29,000/-ರೂ ಹಣನ್ನು ವರ್ಗಾವಣೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾಸುದೇವ ಪ್ರಭು ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 111(4),319(2)308(2)318(4),BNS 66(D) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!