ಕಾರ್ಕಳ: ದಿನಾಂಕ:14-07-2026 (ಹಾಯ್ ಉಡುಪಿ ನ್ಯೂಸ್) ತಾಲೂಕಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಯನ್ನು ಪ್ರವೇಶ ಮಾಡಬೇಕಾದರೆ ಹೊಂಡ ಗುಂಡಿಗಳನ್ನು ಹಾರಿ ಕೊಂಡು ಪ್ರವೇಶ ಮಾಡಬೇಕಾದ ಅನಿವಾರ್ಯತೆ ಸ್ರಷ್ಟಿಯಾಗಿದೆ ಎಂದು ಸಾರ್ವಜನಿಕರು ದೂರಿ ಕೊಂಡಿದ್ದಾರೆ.
ಸರ್ಕಾರಿ ಆಸ್ಪತ್ರೆ ಗೆ ರೋಗಿಗಳನ್ನು ತುರ್ತು ಹೊತ್ತು ತರುವ ಆಂಬ್ಯುಲೆನ್ಸ್ ವಾಹನಗಳು ಈ ಹೊಂಡ ಗುಂಡಿಗಳಲ್ಲಿ ಬಿದ್ದು ಏಳುವಾಗ ರೋಗಿಗಳು ಸ್ಟ್ರಚರ್ ನಿಂದ ಮೇಲೆ ಹಾರಿ ಕೆಳಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಆಸ್ಪತ್ರೆಯ ಪ್ರವೇಶ ದ್ವಾರದಲ್ಲೇ ಈ ರೀತಿಯ ಅವ್ಯವಸ್ಥೆ ಇರುವುದನ್ನು ದಿನನಿತ್ಯ ಕಂಡರೂ ಸರಿಪಡಿಸದೆ ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕೂಡಲೇ ಆಸ್ಪತ್ರೆಗೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಕಳ ತಾಲೂಕು ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ರೋಗಗ್ರಸ್ಥ ವಾಗಿರುವ ರಸ್ತೆ ಯನ್ನು ಸರಿಪಡಿಸಬೇಕು ಹಾಗೂ ಸುತ್ತಮುತ್ತಲಿನ ಪೊದೆಗಳನ್ನು ತೆಗೆದು ಪರಿಸರ ಸ್ವಚ್ಛ ಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



