ಹಿರಿಯಡ್ಕ: ದಿನಾಂಕ 14/07/2026 (ಹಾಯ್ ಉಡುಪಿ ನ್ಯೂಸ್) ಕಲ್ಕುಡ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜೂಜು ನಡೆಸುತ್ತಿದ್ದ 8 ಜನರನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನಿತ್ ಕುಮಾರ್ ಬಿ.ಇ ಅವರು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನಿತ್ ಕುಮಾರ.ಬಿ.ಇ ಅವರು ದಿನಾಂಕ :13-07-2026 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಮಾಹಿತಿಯ ಮೇರೆಗೆ ಕಲ್ಕುಡ ದೇವಸ್ಥಾನದ ಬಳಿ ತಲುಪಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು 10 ರಿಂದ 15 ಜನರು ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ, ಅವುಗಳನ್ನು ಕಾಳಗಕ್ಕೆ ಬಿಟ್ಟು ಅವುಗಳಿಗೆ ಹಿಂಸೆಯನ್ನು ನೀಡುತ್ತಾ ಕಾಳಗದ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದಲ್ಲಿಗೆ ದಾಳಿ ಮಾಡಿದಾಗ ಕೆಲವರು ಓಡಿ ಹೋಗಿರುತ್ತಾರೆ.
ಪೊಲೀಸರು ದಾಳಿ ಮಾಡಿದಾಗ ಸ್ಥಳದಲ್ಲಿದ್ದ 1)ದಿನೇಶ ಶೆಟ್ಟಿ, 2)ಉದಯ ಕುಮಾರ,3) ಗುರುರಾಜ, 4) ಹರೀಶ, 5)ಪ್ರವೀಣ, 6)ಸುರೇಶ,7) ನಾರಾಯಣ, 8)ಮಹೇಶ ಮತ್ತು ಒಂದು ಕಾರು ಮತ್ತು 8 ಮೋಟಾರ್ ಮತ್ತು ನಗದು 36,210/- ರೂಪಾಯಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ .
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ :87 KP Act ಮತ್ತು ಕಲಂ:11(1 ) (A) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ
