IMG-20260714-WA0085.jpg
Spread the love

ಉಡುಪಿ : ದಿನಾಂಕ: 14/07/2026 (ಹಾಯ್ ಉಡುಪಿ ನ್ಯೂಸ್)ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ಶ್ರೀಯುತ ರವಿ ಕೃಷ್ಣ ರೆಡ್ಡಿ ಅವರ 52ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ದಿನಾಂಕ:14-07-2026ರಂದು ಮಂಗಳವಾರದಂದು ಸೇವಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸಮಿತಿ ಮತ್ತು ಎಲ್ಲಾ ತಾಲೂಕು ಸಮಿತಿಗಳ ಒಗ್ಗೂಡುವಿಕೆಯೊಂದಿಗೆ ಆಚರಿಸಲಾಯಿತು.

ಈ ವರ್ಷದ ವಿಶೇಷ ಸೇವೆಯಾಗಿ ಕಾರ್ಕಳ ತಾಲೂಕಿನ ಆನೆಕೆರೆ ಶ್ರೀ ಕೃಷ್ಣಮಠದ ಸಮೀಪದ ಚೇತನ ವಿಶೇಷ ಶಾಲೆಯಲ್ಲಿರುವ ವಿಕಲಚೇತನ ಮಕ್ಕಳಿಗೆ ಮಧ್ಯಾಹ್ನದ ಅನ್ನದಾಸೋಹವನ್ನು ಸಮರ್ಪಿಸಲಾಯಿತು. ಮಕ್ಕಳ ಮುಖದಲ್ಲಿನ ನಗುವೇ ನಮ್ಮ ನಾಯಕರಿಗೆ ನಾವು ನೀಡುವ ಅತ್ಯುತ್ತಮ ಜನ್ಮದಿನದ ಕಾಣಿಕೆ ಎಂಬ ಭಾವನೆಯೊಂದಿಗೆ ಈ ಸೇವೆ ನೆರವೇರಿತು .

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು. ಚೇತನ ವಿಶೇಷ ಶಾಲೆಯ ಆಡಳಿತ ಮಂಡಳಿ, ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ ಮತ್ತು ಶಾಲೆಯ ಮಕ್ಕಳು ಭಾಗವಹಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!