FB_IMG_1783952117370.jpg
Spread the love

ಉಡುಪಿ : ದಿನಾಂಕ: 12-07-2026 (ಹಾಯ್ ಉಡುಪಿ ನ್ಯೂಸ್) ನಗರದ ಕಲ್ಸಂಕ ಪ್ರದೇಶದಲ್ಲಿ ಪುಟ್ಟ ಮಗುವಿನೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ದೊರೆತ ತಕ್ಷಣ ಉಡುಪಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಮಗುವಿನ ಸುರಕ್ಷತೆ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಕುಟುಂಬವನ್ನು ಮಂಗಳೂರಿನ ವಾಮಂಜೂರಿನ ಸರ್ಕಾರಿ ಆಶ್ರಯ ಗೃಹಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿದರು.

ಉಡುಪಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಭಿಕ್ಷಾಟನೆ ಮಾಡುತ್ತಿದ್ದ ಮಗುವಿಗೆ ಮತ್ತು ಕುಟುಂಬಕ್ಕೆ ರಕ್ಷಣೆ ದೊರೆತಿದೆ. ಉಡುಪಿ ಪೊಲೀಸರು ಇದೇ ರೀತಿ ಕಾರ್ಯಾಚರಣೆ ಮುಂದುವರಿಸಿದರೆ ನಗರದ ಕ್ರಷ್ಣ ಮಠ ಹಾಗೂ ಇನ್ನಿತರ ಕಡೆ ಪುಟ್ಟ ಮಕ್ಕಳನ್ನು ಮುಂದೆ ಹಿಡಿದುಕೊಂಡು ನಡೆಸುವ ಭಿಕ್ಷಾಟನೆಗೆ ಅಂತ್ಯ ಕಾಣ ಬಹುದು.

error: No Copying!