ಕುಂದಾಪುರ: ದಿನಾಂಕ 12/07/2026 (ಹಾಯ್ ಉಡುಪಿ ನ್ಯೂಸ್) ಕೊರ್ಗಿ ಗ್ರಾಮದ ಮಣೂರು ಮನೆ ಎಂಬಲ್ಲಿರುವ ಸರ್ಕಾರಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಡುತ್ತಿದ್ದ ಐವರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಬಿ.ಎಸ್ ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ B S, ಅವರು ದಿನಾಂಕ :12-07-2026 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ಮಣೂರುಮನೆ ಎಂಬಲ್ಲಿರುವ ಸರ್ಕಾರಿ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಸೇರಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ .
ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ 1) ಮಂಜುನಾಥ(45), ತಲ್ಲೂರು,ಕುಂದಾಪುರ , 2) ಸುಕ್ಷಯ್ (29), ಮಣೂರು ಗ್ರಾಮ, ಕುಂದಾಪುರ, 3) ಶರಣ (27), ಬೇಳೂರು ಗ್ರಾಮ, ಕುಂದಾಪುರ,4) ರಮೇಶ (32), ಕೊರ್ಗಿ ಗ್ರಾಮ, ಕುಂದಾಪುರ , 5) ರಜತ (27), ಕೆದೂರು ಗ್ರಾಮ, ಕುಂದಾಪುರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದವರ ಬಳಿಯಿದ್ದ 1) ಒಟ್ಟು 1,600/- ರೂಪಾಯಿ, 2) ಜೀವಂತ ಕೋಳಿ ಹುಂಜ-2, 3) ಕೋಳಿ ಬಾಳು-01 4) ಕೋಳಿ ಕಾಲಿಗೆ ಬಾಳು ಕಟ್ಟಲು ಬಳಸಿದ ಹಗ್ಗ-01, 5) ಬೀಣಿ ಕೈ ಚೀಲ-02, 6) KA-20-HG-2569 ನೇ ಹೊಂಡಾ ಶೈನ್ ಮೋಟಾರು ಸೈಕಲ್, 7) KA-20-ED-5131 ನೇ CBZ ಕೆಂಪು ಬಣ್ಣದ ಸ್ಕೂಟಿ, 8) KA-20-ED-3003 ನೇ Yamaha RX ಮೋಟಾರು ಸೈಕಲ್ ಸ್ವಾದೀನಪಡಿಸಿಕೊಂಡಿದ್ದು, ಆರೋಪಿತರುಗಳು ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿಗಳಿಗೆ ಆಹಾರ, ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP Act & ಕಲಂ:11(1)(D) ಪ್ರಾಣಿ ಹಿಂಸೆ ತಡೆ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
