ಹಿರಿಯಡ್ಕ: ದಿನಾಂಕ 09/07/2026 (ಹಾಯ್ ಉಡುಪಿ ನ್ಯೂಸ್) ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್ ರೂಮ್ ನಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ 26 ಜನರನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಬಿ.ಇ ಅವರು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಬಿ.ಇ, ಅವರಿಗೆ ದಿನಾಂಕ: 07-07-2026 ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್ ರೂಮ್ ನಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಜೂಜಾಟ ಆಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದ ಮೇರೆಗೆ ಕೂಡಲೇ ದಾಳಿ ನಡೆಸಿದ್ದಾರೆ .
ಪೊಲೀಸ್ ದಾಳಿ ನಡೆದಾಗ ಜೂಜಾಟ ಆಡುತ್ತಿದ್ದ ಸತೀಶ ಮತ್ತು ಇತರೇ 25 ಜನ ಆರೋಪಿತರನ್ನು ಬಂಧಿಸಿ ವಶಕ್ಕೆ ಪಡೆದು ಅವರು ಜೂಜಾಟಕ್ಕೆ ಬಳಸಿದ್ದ ಒಟ್ಟು 1,31,630/- ನಗದು ಹಣ ಹಾಗೂ ಇಸ್ಪೀಟ್ ಎಲೆಗಳು , ಪ್ಯಾಕ್ ಮಾಡಿದ ಇಸ್ಪೀಟ್ ಎಲೆಯ ಕಟ್ಟು, ಜಾಕ್‌ಪಟ್ ಹೆಸರಿನ ಇಸ್ಪೀಟ್ ಎಲೆಗಳ ಬಾಕ್ಸ್ , ವಿವಿದ ಕಂಪೆನಿಯ ಮೊಬೈಲ್ ಪೋನ್ ಗಳು ಒಟ್ಟು 25 , ಮರದ ಟೇಬಲ್ -1, ಮರದ ಕುರ್ಚಿಗಳು, ಪ್ಲಾಸ್ಟಿಕ್ ಕುರ್ಚಿ, ಮೋಟರ್ ಸೈಕಲ್ -3 ಹಾಗೂ ವಿವಿಧ ಕಂಪೆನಿಗಳ ಕಾರು 5 ಜಪ್ತಿ ಮಾಡಿದ್ದಾರೆ .
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ:80 KP ACT ರಂತೆ ಪ್ರಕರಣ ದಾಖಲಾಗಿದೆ.
