ಉಡುಪಿ: ದಿನಾಂಕ:09-07-2026(ಹಾಯ್ ಉಡುಪಿ ನ್ಯೂಸ್) ನಗರಸಭೆಯ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಡೆಂಗ್ಯೂ ಜ್ವರ ಉಲ್ಬಣಗೊಂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉಡುಪಿ ನಗರಸಭೆಯ ಪೌರಾಯುಕ್ತರು ಆಡಳಿತಾಧಿಕಾರಿಯಾಗಿ ವಿಫಲರಾಗಿದ್ದು ನಗರದಲ್ಲಿ ಸ್ವಚ್ಛ ತೆಯ ಕಾರ್ಯ ನಿರಂತರವಾಗಿ ನಡೆಯುತ್ತಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ನಗರಾಡಳಿತದ ವೈಫಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಯಿಲೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿಯೂ ನಗರದಲ್ಲಿ ಮನೆ ಮನೆ ಗೆ ತೆರಳಿ ಔಷಧಿ ಸಿಂಪಡಿಸುವ ನಗರ ಸಭೆಯ ಕೆಲಸಗಾರರು ಕಾಣುತ್ತಿಲ್ಲ! ಫಾಗಿಂಗ್ ಯಂತ್ರ ಗಳೂ ಕಾಣುತ್ತಿಲ್ಲ! ಒಟ್ಟಾರೆಯಾಗಿ ನಗರಸಭೆಯ ಆರೋಗ್ಯ ಇಲಾಖೆಗೆಯೇ ಡೆಂಗ್ಯೂ ಜ್ವರ ಅಂಟಿಕೊಂಡಿದ್ದು ಅದನ್ನು ಇಡೀ ನಗರಕ್ಕೆ ಹರಡುವ ಕೆಲಸವನ್ನು ಈ ಆರೋಗ್ಯಾಧಿಕಾರಿಗಳು ನಡೆಸುತ್ತಿರುವಂತಿದೆ!
ನಗರದಲ್ಲಿ ಡೆಂಗ್ಯೂ ಜ್ವರದ ರೋಗಿಗಳು ಹೆಚ್ಚಳವಾಗುತ್ತಿರುವಾಗ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸ ಬೇಕಾದ ನಗರಸಭೆಯ ಆರೋಗ್ಯ ಇಲಾಖೆ ಸ್ವತಹ ರೋಗಿಯಾಗಿ ಮಲಗಿಕೊಂಡಿದೆ?
ಜಿಲ್ಲಾಧಿಕಾರಿಗಳಾದರೂ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ನಗರದಲ್ಲಿ ಜೌಷಧಿ ಸಿಂಪಡಣೆ, ನಿರಂತರ ಫಾಗಿಂಗ್ , ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಹಾಗೂ ಇನ್ನಿತರ ಕ್ರಮ ಕೈಗೊಳ್ಳುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಗರದ ಜನತೆ ಆಗ್ರಹಿಸಿದ್ದಾರೆ.
