ಪಡುಬಿದ್ರಿ: ದಿನಾಂಕ :08-07-2026 (ಹಾಯ್ ಉಡುಪಿ ನ್ಯೂಸ್) ವಾಹನ ಪಾರ್ಕಿಂಗ್ ಮಾಡಿದ ವಿಚಾರದಲ್ಲಿ ಬಿ.ಎಂ. ಹುಸೇನ್ ಎಂಬವರಿಗೆ ಕಾರೊಂದರಲ್ಲಿ ಬಂದ ಯುವಕರ ತಂಡ ಚಾಕು ತೋರಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಖಾಸಗಿ ದೂರು ದಾಖಲಾಗಿದೆ.
ಕಾಪು ತಾಲೂಕು ಹೆಜಮಾಡಿ ಗ್ರಾಮದ ನಿವಾಸಿ ಬಿ.ಎಂ.ಹುಸೇನ್ ಎಂಬವರು ದಿನಾಂಕ 04/04/2025 ರಂದು ಶುಕ್ರವಾರದ ಜುಮ್ಮಾ ನಮಾಜನ್ನು ಮಾಡಲು ಕಾಫು ತಾಲೂಕು ಹೆಜಮಾಡಿ ಗ್ರಾಮದ ಕನ್ನಂಗಾರ್ ಜುಮ್ಮಾ ಮಸೀದಿಗೆ ಬಂದು ನಮಾಜ್ ಮಾಡಿ ವಾಪಾಸು ಹೋಗಲು ಮಸೀದಿ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಕುಳಿತುಕೊಂಡಾಗ ಮದ್ಯಾಹ್ನ 1:30 ಗಂಟೆಗೆ ಆರೋಪಿ ಜಾಕೀರ್ ಹುಸೇನ್ ಎಂಬವನು ಇತರರೊಂದಿಗೆ KA-20-MG-0243 ನೇ ಕಾರಿನಲ್ಲಿ ಬಂದು ಬಿ.ಎಂ ಹುಸೇನ್ ರಿಗೆ ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ಇದು ನಾವು ಪಾರ್ಕ್ ಮಾಡುವ ಸ್ಥಳ ನೀನೇಕೆ ಇಲ್ಲಿ ಕಾರು ನಿಲ್ಲಿಸಿದ್ದೀಯಾ ಎಂದು ಬೈದು, ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಬಿ.ಎಂ ಹುಸೇನ್ ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 126(2), 351(2̧), 352 BNS ರಂತೆ ಪ್ರಕರಣ ದಾಖಲಾಗಿದೆ.
