IMG-20240220-WA0038.jpg
Spread the love

ಹೆಬ್ರಿ: ದಿನಾಂಕ 08/07/2026 (ಹಾಯ್ ಉಡುಪಿ ನ್ಯೂಸ್) ವಿಜಯಲಕ್ಷ್ಮೀ ಬಾರ್ ಎಂಡ್ ರೆಸ್ಟೋರೆಂಟ್ ನ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರ ಎ ಕೆ ಅವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರ ಎ ಕೆ, ಅವರಿಗೆ  ಹೆಬ್ರಿ ಗ್ರಾಮದ ವಿಜಯಲಕ್ಮೀ ಬಾರ್‌ ಎಂಡ್‌ ರೆಸ್ಟೋರೆಂಟ್‌ ನ ಎದುರು ರಸ್ತೆಯ ಬದಿಯಲ್ಲಿ ತಿರುಗಾಡಿಕೊಂಡು ಓರ್ವ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಅಟ ಆಡುತ್ತಿರುವುದಾಗಿ ಸಾರ್ವಜನಿಕ ರಿಂದ ಮಾಹಿತಿ ಬಂದ ಮೇರೆಗೆ  ಕೂಡಲೇ ದಾಳಿ ಮಾಡಿದ್ದಾರೆ .

ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದವನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚೇತನ (24), ಪುತ್ತೂರು ಗ್ರಾಮ ಉಡುಪಿ ಎಂದು ತಿಳಿಸಿದ್ದು, ಆತ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು 1,670/- ರೂಪಾಯಿ ಹಾಗೂ ಮಟ್ಕಾ ನಂಬ್ರ ಬರೆದ ಪುಸ್ತಕ ಹಾಗೂ ಬಾಲ್ ಪೆನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 78(I)(iii) KP ACT ರಂತೆ ಪ್ರಕರಣ ದಾಖಲಾಗಿದೆ. ‌

error: No Copying!