ಬೈಂದೂರು: ದಿನಾಂಕ:07-07-2026(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)(ಭೀಮ ವಾದ) ರಾಜ್ಯ ಸಮಿತಿ -ಬೆಂಗಳೂರು ಇವರಿಂದ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಶೂದ್ರಾತೀ ಶೂದ್ರರಿಗೆ ಮೀಸಲಾತಿ ನೀಡಿದ ಮೀಸಲಾತಿ ಜನಕ ಛತ್ರಪತಿ ಸಾಹು ಮಹಾರಾಜ್ ರವರ 152 ನೇ ಜಯಂತಿ ಹಾಗೂ ರಾಜ್ಯ ಸಮಿತಿಯ ಸರ್ವ ಸದಸ್ಯರ ಸಭೆ ದಿನಾಂಕ:26-07-2026 ರಂದು ಬೆಳಿಗ್ಗೆ 11 ಘಂಟೆಗೆ ಉಡುಪಿ ಜಿಲ್ಲೆಯ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
