ಉಡುಪಿ: ದಿನಾಂಕ :01-07-2026 (ಹಾಯ್ ಉಡುಪಿ ನ್ಯೂಸ್) ಆದಿ ಉಡುಪಿ ಎಪಿಎಂಸಿ ಯಾರ್ಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಜೂಜು ನಡೆಸುತ್ತಿದ್ದ ಮೂವರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಈರಣ್ಣ ಶಿರಗುಂಪಿ ಅವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಈರಣ್ಣ ಶಿರಗುಂಪಿ ಅವರು ದಿನಾಂಕ :29-06-2026 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಆದಿ ಉಡುಪಿ ಎಪಿಎಂಸಿ ಯಾರ್ಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ್ದಾರೆ .
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಜುಗಾರಿ ಆಡುವುದರಲ್ಲಿ ನಿರತರಾಗಿದ್ದ 3 ಜನರನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ 1) ಪ್ರಭ ಗೌಡ,ಯಾದಗಿರಿ ಜಿಲ್ಲೆ, 2) ಶೇರಪ್ಪ,ಯಾದಗಿರಿ ಜಿಲ್ಲೆ, 3) ಸುಜಿತ್ ಕುಮಾರ್, ಓಡಿಸ್ಸಾ ರಾಜ್ಯ ಎಂಬವರನ್ನು ಬಂಧಿಸಿ ಇವರಿಂದ ಆಟಕ್ಕೆ ಬಳಿಸಿದ ಇಸ್ಪೀಟು ಎಲೆಗಳು ಹಾಗೂ 1,160/- ರೂಪಾಯಿ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 87 KP act ರಂತೆ ಪ್ರಕರಣ ದಾಖಲಾಗಿದೆ.
