ಉಡುಪಿ: ದಿನಾಂಕ:01-07-2026(ಹಾಯ್ ಉಡುಪಿ ನ್ಯೂಸ್) ನಗರದ ಕಲ್ಸಂಕದ ಸಿಗ್ನಲ್ ನಲ್ಲಿ ಇದೀಗ ಕೆಲವು ದಿನಗಳಿಂದ ಮಂಗಳಮುಖಿಗಳಿಂದ ? ಭಿಕ್ಷಾಟನೆ ಪ್ರಾರಂಭವಾಗಿರುವ ಬಗ್ಗೆ ಸಾರ್ವಜನಿಕರು ದೂರಿ ಕೊಂಡಿದ್ದಾರೆ.
ಕಲ್ಸಂಕದ ಸಿಗ್ನಲ್ ನಲ್ಲಿ ಹಿಜಡಾ ಗಳು ಭಿಕ್ಷಾಟನೆ ಪ್ರಾರಂಭಿಸುವ ಮೂಲಕ ಉಡುಪಿ ನಗರದ ಜನತೆಯು ಕಲ್ಸಂಕ ರಸ್ತೆಯಲ್ಲಿ ಇನ್ನು ಮುಂದೆ ಪ್ರಯಾಣಿಸುವಾಗ ನೆಮ್ಮದಿ ಕಳೆದು ಕೊಳ್ಳುವಂತಾಗಿದೆ.
ಭಿಕ್ಷೆ ಗಾಗಿ ಕೇಳುವುದು, ಭಿಕ್ಷೆ ಕೊಡದಿದ್ದರೆ ಬೈಯ್ಯುವುದು,ಶಾಪ ಹಾಕುವುದು, ಅಸಭ್ಯವಾಗಿ ವರ್ತಿಸುವುದು ಇನ್ನು ಮುಂದೆ ಕಲ್ಸಂಕ ಸಿಗ್ನಲ್ ನಲ್ಲಿ ಹೊಸದೊಂದು ಸಮಸ್ಯೆ ಯ ಸ್ರಷ್ಟಿಗೆ ಉಡುಪಿ ಪೊಲೀಸ್ ಇಲಾಖೆ ಸಹಕಾರ ನೀಡಿದಂತಾಗಿದೆ.
ಪೊಲೀಸರಿಗೆ ಮಾಮೂಲು ಸಂದಾಯವಾಗುತ್ತಿದೆಯೇ?
ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಇದೆ. ಈ ಪ್ರಶ್ನೆಗೆ ಪೂರಕ ಎಂಬಂತೆ ನಗರದ ಐರೋಡಿ ಸರ್ಕಲ್ ನಲ್ಲಿ, ಸರಸ್ವತಿ ಶಾಲೆ ವಠಾರದಲ್ಲಿ ಮತ್ತು ಶಾರದಾ ಹೋಟೆಲ್ ಸನಿಹದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತಡರಾತ್ರಿ ಅಸಭ್ಯವಾಗಿ ವೇಷ ಧರಿಸಿ ಕೊಂಡು ಬಹಿರಂಗವಾಗಿ ವೇಶ್ಯಾವಾಟಿಕೆ ದಂಧೆ ನಡೆಸುವುದನ್ನು ಎಲ್ಲರೂ ಕಾಣ ಬಹುದು. ಈ ಬಗ್ಗೆ ಹಾಯ್ ಉಡುಪಿ ಪತ್ರಿಕೆ ಪೊಲೀಸರ ಗಮನ ಸೆಳೆಯಲು ವರದಿ ಮಾಡುತ್ತಲೇ ಇದ್ದರೂ ವರದಿಯಾದ ಕೆಲವು ದಿನ ಮಾಯವಾಗುವ ಈ ವೇಶ್ಯಾವಾಟಿಕೆ ನಡೆಸುತ್ತಿರುವವರು ಮತ್ತೆ ಪ್ರತ್ಯಕ್ಷ ರಾಗಿ ಅಸಭ್ಯವಾಗಿ ವರ್ತಿಸುತ್ತಾ ಉಡುಪಿಯ ಮಾನ ಹರಾಜು ಹಾಕುತ್ತಿದ್ದಾರೆ. ಇವರು ಮಂಗಳಮುಖಿಯರೋ ,ವೇಷಧಾರಿಗಳೋ ಎಂಬುದೇ ಪ್ರಶ್ನೆ ಯಾದರೂ ಇವರು ನಡೆಸುತ್ತಿರುವುದು ಪಕ್ಕಾ ಕ್ರಿಮಿನಲ್ ದಂಧೆ.
ಈ ತಡರಾತ್ರಿ ಅಸಭ್ಯವಾಗಿ ದಂಧೆ ನಡೆಸುವವರ ಹಿಂದೆ ಕೆಲವರು ಪುಡಿ ರೌಡಿಗಳು ಬೆನ್ನೆಲುಬಾಗಿ ನಿಂತು ಪೊಲೀಸ್ ಇಲಾಖೆ ಯೊಂದಿಗೆ ಮಾಮೂಲಿ ಸೆಟ್ಟಿಂಗ್ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಡರಾತ್ರಿ ಅಸಭ್ಯವಾಗಿ ಬಟ್ಟೆ ಧರಿಸಿ ನಿಂತು ವಾಹನಗಳಲ್ಲಿ ಸಂಚರಿಸುವವರನ್ನು ಆಕರ್ಷಿಸಿ ವ್ಯವಹಾರಕ್ಕೆಂದು ! ಕತ್ತಲೆಗೆ ಕರೆದೊಯ್ದು ಅಲ್ಲಿ ಚಿನ್ನದ ಸರ, ಪರ್ಸ್, ಮೊಬೈಲ್ ಸೆಳೆದು ಕೊಳ್ಳುತ್ತಿರುವ ಬಗ್ಗೆಯೂ ಆರೋಪಗಳಿವೆ. ಈ ಕೆಲಸದ ಹಿಂದೆ ಇವರ ತಂಡದ ಯುವಕರು ಕತ್ತಲಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಾರೆ ಎಂಬ ಆರೋಪವಿದೆ.ಈ ಬಗ್ಗೆ ನೊಂದವರು ದೂರು ನೀಡಿದರೂ ತಮ್ಮದೇ ಮರ್ಯಾದೆ ಹೋಗುತ್ತದೆ ಎಂದು ಗಂಡಸರು ದೂರು ನೀಡದೆ ಇರುವುದು ಈ ದಂಧೆ ಕೋರರಿಗೆ ಪ್ಲಸ್ ಪಾಯಿಂಟ್ ಆಗಿದೆ. ರಾಜಾರೋಷವಾಗಿ ನಗರದ ಹೃದಯ ಭಾಗದಲ್ಲಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಲಾಟಿ ಬೀಸಿ ಕೇಸು ಜಡಿಯದೆ ಸುಮ್ಮನಿರುವುದನ್ನು ಕಂಡರೆ ಕೆಳಗಿನಿಂದ ಮೇಲಿನವರೆಗೆ ಮಾಮೂಲಿ ಸಂದಾಯವಾಗುತ್ತಿರುವ ಅನುಮಾನ ಸಾರ್ವಜನಿಕರಿಗೆ ಕಾಡಿದರೆ ತಪ್ಪಲ್ಲ.
ಇದೀಗ ಹೊಸದಾಗಿ ಕಲ್ಸಂಕದ ಸಿಗ್ನಲ್ ನಲ್ಲಿ ಹಗಲು ಭಿಕ್ಷಾಟನೆಯ ಹೆಸರಲ್ಲಿ ಹಗಲು ದಂಧೆ ಪ್ರಾರಂಭವಾಗಿದೆ. ಜಿಲ್ಲೆಯ ಜನರು ಬುದ್ಧಿಒಂತೆರು ಆದ ಕಾರಣ ಯಾರೂ ಪ್ರತಿಭಟಿಸುವುದಿಲ್ಲ, ಪ್ರಶ್ನಿಸುವುದಿಲ್ಲ ಎಂಬ ಧ್ರಢ ವಿಶ್ವಾಸದಿಂದ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ತೆಪ್ಪಗೆ ,ಕಂಡೂ ಕಾಣದಂತೆ ಕರ್ತವ್ಯ ನಿರ್ವಹಿಸುವಲ್ಲಿ ಬ್ಯುಸಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದರೂ ಸಮಯ ಮಾಡಿಕೊಂಡು ಕಲ್ಸಂಕದ ಸಿಗ್ನಲ್ ನಲ್ಲಿ ಭಿಕ್ಷಾಟನೆ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಂಡು ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹುಡುಕುವರೋ? ಅಥವಾ ಕಲ್ಸಂಕ ಸಿಗ್ನಲ್ ನಲ್ಲಿ ಭಿಕ್ಷಾಟನೆ ಉಡುಪಿಗೆ ಶಾಶ್ವತ ಶಾಪವಾಗಿ ಕಾಡುವುದೋ ಕಾದು ನೋಡಬೇಕು.
