ಉಡುಪಿ: ದಿನಾಂಕ:21-06-2026(ಹಾಯ್ ಉಡುಪಿ ನ್ಯೂಸ್) ಕುಂದಾಪುರ ತಾಲೂಕು ಅಂಪಾರು ಗ್ರಾಮದ ದಾಸರಮಕ್ಕಿಯಲ್ಲಿ 21/06/2026ರಂದು ದಲಿತ ಹಕ್ಕುಗಳ ಸಮಿತಿ (DHS) ವತಿಯಿಂದ ಜನಜಾಗೃತಿಸಭೆ ನಡೆಯಿತು.
ಕೃಷ್ಣ ಪಾಣಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿ.ಎಚ್.ಎಸ್ ಜಿಲ್ಲಾಧ್ಯಕ್ಷರಾದ ಸಂಜೀವ ಬಳ್ಕೂರು, ಅಂಪಾರಿನ ಸಮಾಜ ಸೇವಕರಾದ ಬಾಲಕೃಷ್ಣ ನಾಯ್ಕ ಹಾಗೂ ಪತ್ರಕರ್ತರು ,ಜನಪರ ಹೋರಾಟಗಾರರೂ ಆದ ಶ್ರೀರಾಮ ದಿವಾಣ ಮೂಡುಬೆಳ್ಳೆ ಅವರು ಸಂಘಟನೆ, ಹೋರಾಟ, ಸರಕಾರಿ ಸೌಲಭ್ಯಗಳು, ದಲಿತ ಸಬಲೀಕರಣ ಇತ್ಯಾದಿ ವಿಷಯಗಳ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.
ಹಕ್ಕುಪತ್ರ, ನಿವೇಶನ, ಕುಡಿಯುವ ನೀರು, ಸ್ವ ಉದ್ಯೋಗ ಇತ್ಯಾದಿಗಳಿಗಾಗಿ ಕೆಲಸ ಮಾಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ದಾಸರಮಕ್ಕಿ ಮತ್ತು ನೇರಳಕಟ್ಟೆ ಘಟಕಗಳನ್ನು ರಚಿಸಲಾಯಿತು.
ದಾಸರಮಕ್ಕಿ ಘಟಕದ ಅಧ್ಯಕ್ಷರಾಗಿ ಕು. ವಿನುಷಾ, ಉಪಾಧ್ಯಕ್ಷರಾಗಿ ಸತೀಶ್, ಕಾರ್ಯದರ್ಶಿಯಾಗಿ ಗಣೇಶ್, ಕೋಶಾಧಿಕಾರಿಯಾಗಿ ಶ್ರೀಮತಿ ಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಯಿತು.
ನೇರಳಕಟ್ಟೆ ಘಟಕದ ಅಧ್ಯಕ್ಷರಾಗಿ ಕು. ಪವಿತ್ರಾ, ಉಪಾಧ್ಯಕ್ಷರಾಗಿ ಈಶ್ವರ, ಕಾರ್ಯದರ್ಶಿಯಾಗಿ ಉಷಾ ಹಾಗೂ ಕೋಶಾಧಿಕಾರಿಯಾಗಿ ಮಂಜುನಾಥ ಅವರನ್ನು ಆಯ್ಕೆ ಮಾಡಲಾಯಿತು.
