IMG-20260615-WA0003.jpg
Spread the love

ಬೆಂಗಳೂರು : ದಿನಾಂಕ:21-06-2026(ಹಾಯ್ ಉಡುಪಿ ನ್ಯೂಸ್) ಗಾಂಧಿ ನಗರದ ಹೋಟೆಲ್ ಸ್ಯಾಂಕ್ ನಲ್ಲಿ ನಡೆದ ಕರ್ನಾಟಕ ಸೇನೆಯ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಎಂ ಬಸವರಾಜ್ ಪಡಕೋಟೆ ಯವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿಗಳಾದ ಸುಜಯ್ ಪೂಜಾರಿಯವರ ಸಮ್ಮುಖದಲ್ಲಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯವರಾದ ಲಕ್ಷ್ಮಿ ಅವರು  ಕರ್ನಾಟಕ ಸೇನೆಯ ನೂತನ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಅನಿತಾ ಬಿವಿ ಅವರನ್ನು ಆಯ್ಕೆಮಾಡಿದರು.

ಕರ್ನಾಟಕ ಸೇನೆಯ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿಯಾಗಿ ನೇಮಕ ಗೊಂಡಿರುವ ಸುಜಯ್ ಪೂಜಾರಿರವರನ್ನು ರಾಜ್ಯಾಧ್ಯಕ್ಷರಾದ ಶ್ರೀ ಎಂ ಬಸವರಾಜ ಪಡುಕೋಟೆ ಯವರು ಸಭೆಯಲ್ಲಿ ಹೂಗುಚ್ಚ ನೀಡಿ ಅಭಿನಂದಿಸಿದರು.

ಉಡುಪಿ ಜಿಲ್ಲಾ ಸಂಘಟನೆಯನ್ನು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಗೊಂಡಿರುವ ಸುಜಯ್ ಪೂಜಾರಿ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಅನಿತಾ ಬಿವಿ ಅವರ ನೇತೃತ್ವದಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೇನೆಯ ರಾಜ್ಯ ಗೌರವಾಧ್ಯಕ್ಷರು ಹಾಗೂ ಕನ್ನಡ ಚಲನಚಿತ್ರ ಖ್ಯಾತ ನಟರು, ನಿರ್ಮಾಪಕ ಶ್ರೀಯು ಗಣೇಶ್ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ನಾಗರಾಜ್ ಚಕನಹಳ್ಳಿ , ಪ್ರಧಾನ ರಾಜ್ಯ ಸಂಚಾಲಕ ಶ್ರೀ ಭೀಮಣ್ಣ ಶಾಖಾಪುರ ,ರಾಜ್ಯ ಉಪಾಧ್ಯಕ್ಷ ಅನಿಲ್ ಬಿ.ಶೆಟ್ಟಿ , ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಸುನಿತ ಗೌಡ ಮೊದಲಾದವರು ಉಪಸ್ಥಿತರಿದ್ದರು.

error: No Copying!