ಹಿರಿಯಡ್ಕ: ದಿನಾಂಕ:19-06-2026(ಹಾಯ್ ಉಡುಪಿ ನ್ಯೂಸ್) ಇಬ್ಬರು ಕಳ್ಳರು ಕುರ್ಪಾಡಿ ಹೊಳೆಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ನಡೆಸುತ್ತಿದ್ದಾರೆ ಎಂದು ವಿಜಯ ಕುಲಾಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ 1 ದಿಲೀಪ್ ಪೂಜಾರಿ ಮತ್ತು 2 ವಿವೇಕ್ ಆಚಾರ್ಯ ಇವರು ಇತರ ಆರೋಪಿತರೊಂದಿಗೆ ಸೇರಿ ಅಕ್ರಮವಾಗಿ ಲಾಭಗಳಿಸುವ ಉದ್ದೇಶದಿಂದ ದಿನಾಂಕ 17-06-2026 ರಂದು ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಯಡ್ಮಡ್ಕ ಸರ್ವೆ ನಂಬ್ರ 74-1 B ಎಂಬಲ್ಲಿರುವ ವಿಜಯ ಕುಲಾಲ್ ಪ್ರಾಯ 48 ವರ್ಷ, ಪೆರ್ಡೂರು ಗ್ರಾಮ ಉಡುಪಿ ತಾಲೂಕು ಇವರ ಮಾವನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕುರ್ಪಾಡಿ ಹೊಳೆಯಲ್ಲಿಯ ಮರಳನ್ನು ಜೆ.ಸಿ.ಬಿ ಮತ್ತು ಇತರ ವಾಹನಗಳನ್ನು ಬಳಸಿ ತೆಗೆದು ಕಳವು ಮಾಡಿ ಸಾಗಿಸಿಕೊಂಡು ಹೋಗಿದ್ದಲ್ಲದೆ ಕೇಳಲು ಹೋದ ವಿಜಯ ಕುಲಾಲ್ ರನ್ನು ಉದ್ದೇಶಿಸಿ ಆರೋಪಿ 1 ಮತ್ತು 2 ನೇಯವರು ನಾವು ಮರಳನ್ನು ತೆಗೆಯುತ್ತೇವೆ ನೀನು ಏನು ಮಾಡಿಕೊಳ್ಳುತ್ತಿ ಮಾಡಿಕೋ ಎಂದು ತುಂಬಾ ಏರು ಧ್ವನಿಯಲ್ಲಿ ಬೈದು ಬೆದರಿಕೆ ಹಾಕಿ ಸುಮಾರು 20000/- ರೂ ಬೆಲೆಯ ಮರಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿಜಯ ಕುಲಾಲ್ ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ U/S 329(3), 351(2), 303(2), R/W 3(5) BNS & 4(1A) 21 MMRD act ರಂತೆ ಪ್ರಕರಣ ದಾಖಲಾಗಿದೆ.
