ಕೋಟ: ದಿನಾಂಕ:08-06-2026(ಹಾಯ್ ಉಡುಪಿ ನ್ಯೂಸ್) ಮೊಳಹಳ್ಳಿ ಗ್ರಾಮದ ಕೋಣಿಹರ ಎಂಬಲ್ಲಿ ಯ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಜನರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್ ಅವರು ದಿನಾಂಕ :07-06-2026 ರಂದು ಠಾಣೆಯಲ್ಲಿರುವಾಗ ಮೊಳಹಳ್ಳಿ ಗ್ರಾಮದ ಕೋಣಿಹರ ಎಂಬಲ್ಲಿ ಭಾಸ್ಕರ ಶೆಟ್ಟಿ ಎಂಬುವವರ ಮನೆಯ ಎದುರು ಹಾಡಿಯಲ್ಲಿ ಹಣವನ್ನು ಪಣವಾಗಿರಿಸಿಕೊಂಡು ಅಂದರ್ – ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1)ಚಂದ್ರ ಮೊಗವೀರ (43),ಮೊಳಹಳ್ಳಿ ಗ್ರಾಮ, ಕುಂದಾಪುರ, 2) ಉಮೇಶ (33) ಹುಣ್ಸೆಮಕ್ಕಿ,ಹೋಂಬಾಡಿ-ಮಂಡಾಡಿ ಗ್ರಾಮ,ಕುಂದಾಪುರ, 3)ಕೃಷ್ಣ (27), ಹುಣ್ಸೆಮಕ್ಕಿ,ಹೋಂಬಾಡಿ-ಮಂಡಾಡಿ ಗ್ರಾಮ,ಕುಂದಾಪುರ, 4) ರಘುರಾಮ ಶೆಟ್ಟಿ (49), ಜಪ್ತಿ ಗ್ರಾಮ,ಕುಂದಾಪುರ, 5) ರಾಜು (39), ಹುಣ್ಸೆಮಕ್ಕಿ,ಹೋಂಬಾಡಿ-ಮಂಡಾಡಿ ಗ್ರಾಮ ಕುಂದಾಪುರ, 6) ಆನಂದ (56), ಬಾಗರಮಕ್ಕಿ ಶಂಕರನಾರಾಯಣ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಇಸ್ಪೀಟು ಜಗಾರಿ ಆಟಕ್ಕೆ ಬಳಸಿದ ಒಟ್ಟು 7,900/- ರೂಪಾಯಿ ನಗದು , ಪ್ಲಾಸ್ಟಿಕ್ ಚೀಲ-1 ಮತ್ತು ಇಸ್ಪೀಟು ಎಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ:87 KP ACT ರಂತೆ ಪ್ರಕರಣ ದಾಖಲಾಗಿದೆ.
