IMG_20260416_201545.jpg
Spread the love

ಕೋಟ: ದಿನಾಂಕ :08-06-2026(ಹಾಯ್ ಉಡುಪಿ ನ್ಯೂಸ್) ಹಪ್ಪಳ ತಯಾರಿಸುವ ಫ್ಯಾಕ್ಟರಿಯ ಮಾಲೀಕನ ನಿರ್ಲಕ್ಷ ದಿಂದಾಗಿ ರಶ್ಮಿ (32) ಎಂಬವರು ತಮ್ಮ ಬೆರಳನ್ನು ಕಳೆದು ಕೊಂಡ ಘಟನೆ ಮತ್ಯಾಡಿಯಲ್ಲಿ ನಡೆದಿದೆ.

ಕುಂದಾಪುರ,ಯಡಾಡಿ ಮತ್ಯಾಡಿ ಗ್ರಾಮದ ನಿವಾಸಿ ರಶ್ಮಿ ಎಂಬವರು 1 ವರ್ಷದ ಹಿಂದೆ ಕುಂದಾಪುರ ತಾಲೂಕು ಯಡಾಡಿ ಮತ್ಯಾಡಿ ಗ್ರಾಮದ ಸಚಿ ಪುಡ್‌ ಪ್ರಾಡಕ್ಟ್‌ ಪ್ಯಾಕ್ಟರಿಯಲ್ಲಿ ನರ್ಸರಿ ಮತ್ತು ಬಿಲ್ಲಿಂಗ್‌ ಕೆಲಸ ಮಾಡಿಕೊಂಡಿದ್ದು , ದಿನಾಂಕ 06/04/2026 ರಂದು ಬೆಳಿಗ್ಗೆ 09:30 ಗಂಟೆಗೆ ಮಾಲೀಕರಾದ ಸಂಜೀವ ಕುಲಾಲ್‌ ರವರು ರಶ್ಮಿ ರವರಲ್ಲಿ ಹಪ್ಪಳ ಯಂತ್ರದಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದು ರಶ್ಮಿ ರವರು ತನಗೆ ಹಪ್ಪಳ ಮೆಷಿನ್‌ ನಲ್ಲಿ ಕೆಲಸ ಮಾಡಿ ಗೊತ್ತಿಲ್ಲ ಎಂದು ತಿಳಿಸಿದರೂ ಆರೋಪಿ ಸಂಜೀವ ಕುಲಾಲ್ ನೀವು ಕೆಲಸಕ್ಕೆ ಬಂದವರು ಕೆಲಸ ಮಾಡಿ ಎಂದು ತಿಳಿಸಿದ ಮೇರೆಗೆ ರಶ್ಮಿ ರವರು ಹಪ್ಪಳ ಯಂತ್ರ ಆನ್‌ ಮಾಡಿ ಹಿಟ್ಟು ಹಾಕಿದ ಸ್ವಲ್ಪ ಹೊತ್ತಲ್ಲಿ ರಶ್ಮಿ ರವರ ಬಲ ಕೈ ಮೆಷಿನ್‌ ನಲ್ಲಿ ಸಿಕ್ಕಿಕೊಂಡಿದ್ದು ನಂತರ ಬಲ ಕೈಯನ್ನು ಮೆಷಿನ್‌ ನಿಂದ ಹೊರತೆಗೆದು ಮಣಿಪಾಲ ಕೆಎಮ್‌ ಸಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಬಲಕೈ ತೋರು ಬೆರಳನ್ನು ತೆಗೆದಿರುತ್ತಾರೆ .

ಆರೋಪಿ ಸಂಜೀವ ಕುಲಾಲ್ ನು ರಶ್ಮಿ ರವರಿಗೆ ಹಪ್ಪಳ ಯಂತ್ರದಲ್ಲಿ ಕೆಲಸ ಮಾಡಲು ಯಾವುದೇ ತರಬೇತಿ ನೀಡದೇ ಮುಂಜಾಗೃತೆಯಾಗಿ ಯಾವುದೇ ಸುರಕ್ಷತೆ ವಹಿಸದೇ ಕೆಲಸ ಮಾಡಲು ಒತ್ತಾಯ ಮಾಡಿ ಆರೋಪಿ ಸಂಜೀವ ಕುಲಾಲ್ ನ ನಿರ್ಲಕ್ಷತನದಿಂದ ರಶ್ಮಿ ರವರು ಬಲಕೈ ಬೆರಳು ಕಳೆದುಕೊಂಡು ಅಂಗ ವೈಪಲ್ಯಕ್ಕೆ ಕಾರಣವಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಶ್ಮಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ:289,125 (b) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!