IMG_20260608_124611.jpg
Spread the love

ಮಲ್ಪೆ: ಅಕ್ರಮವಾಗಿ ಅನಿಲ ಸಿಲಿಂಡರ್ ಗಳನ್ನು ದಾಸ್ತಾನು ಇರಿಸಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚನೆ ನಡೆಸುತ್ತಿದ್ದ ಮಲ್ಪೆಯ ಸನತ್ ಕಾಮತ್ ಎಂಬವನನ್ನು ಆಹಾರ ಶಿರಸ್ತೇದಾರ್ ರಾದ ಆಶಾ ಕೆ (53) ಅವರ ದೂರಿನ ಮೇರೆಗೆ ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ತಾಲೂಕು ಕಛೇರಿಯ ಆಹಾರ ಶಿರಸ್ತೆದಾರರಾದ ಆಶ್ ಕೆ (53) ಅವರಿಗೆ ಮಲ್ಪೆಯ ಸನತ್‌ ಕಾಮತ್‌ ಎಂಬವರು ಅಕ್ರಮವಾಗಿ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ದಿನಾಂಕ 03/06/2026 ರಂದು ಬೆಳಿಗ್ಗೆ  ಶ್ರೀ ದಿನಕರ ಕಾಮತ್‌ ಎಂಬವರು ಆಶಾ ಕೆ ರವರಿಗೆ ಮಾಹಿತಿ ನೀಡಿದ ಮೇರೆಗೆ, ಆಹಾರ ನಿರೀಕ್ಷಕರಾದ ಶ್ರೀ ಹಿತೇಶ್‌ ಯು.ಬಿ ರವರೊಂದಿಗೆ ಆಶಾ ಕೆ ರವರು  ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಜಂಕ್ಷನ್‌ ಬಳಿ ಇರುವ ಸನತ್‌ ಕಾಮತ್‌ ಎಂಬವರ ಮನೆ ಅಂಗಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, 19 ಕೆ.ಜಿ ಯ ಅನಿಲ ತುಂಬಿದ 1 ಸಿಲಿಂಡರ್‌ ಸಹಿತ ಒಟ್ಟು 12 ವಾಣಿಜ್ಯ ಸಿಲಿಂಡರ್‌ಗಳು ಮತ್ತು 5 ಕೆ.ಜಿ ಯ 9 ವಾಣಿಜ್ಯ ಸಿಲಿಂಡರ್‌ಗಳು ಇರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಸನತ್‌ ಕಾಮತ್‌ ರವನ್ನು ವಿಚಾರಣೆ ನಡೆಸಿದಾಗ  ಅವರು ತಾನೇ ಅಲ್ಲಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ, ಈ ಬಗ್ಗೆ ಯಾವುದೇ ಪರವಾನಿಗೆ ಹಾಗೂ ದಾಖಲೆಗಳನ್ನು ಹೊಂದಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಸ್ಥಳದಲ್ಲಿದ್ದ 19 ಕೆಜಿ ಯ 12 ವಾಣಿಜ್ಯ ಸಿಲಿಂಡರ್‌ ಮತ್ತು 5 ಕೆಜಿ ಯ 9 ವಾಣಿಜ್ಯ ಸಿಲಿಂಡರ್‌ಗಳನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ:3,7 Essential Commodities Act And ಕಲಂ. 4,7 Liquified Petroleum Gas Supply And Control Order 2000 ರಂತೆ ಪ್ರಕರಣ ದಾಖಲಾಗಿದೆ.

error: No Copying!