unnamed.jpg
Spread the love

ಬ್ರಹ್ಮಾವರ: ದಿನಾಂಕ:01-06-2026 (ಹಾಯ್ ಉಡುಪಿ ನ್ಯೂಸ್) ಪೇತ್ರಿ ಜಂಕ್ಷನ್ ಬಳಿ ಯಿಂದ ಹಿರಿಯಡ್ಕ ಕಡೆಗೆ ತೆರಳುವ ರಸ್ತೆ ಬ್ಯಾರಿಕೇಡ್ ನಲ್ಲಿ ವಾಹನಗಳಿಗೆ ಸಂಚರಿಸಲು ದಾರಿ ಮಾಡಿ ಕೊಡುವ ವಿಚಾರದಲ್ಲಿ ಕಾರೊಂದರಲ್ಲಿ ಇದ್ದ ನಾಲ್ಕು ಜನರ ತಂಡವೊಂದು ಇನ್ನೊಂದು ಕಾರಿನ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಕಾರ್ಕಳ , ನಂದಳಿಕೆ ನಿವಾಸಿ ಸುಧೀರ್‌ ಶೆಟ್ಟಿ (46) ಎಂಬವರು ದಿನಾಂಕ 30/05/2026 ರಂದು ಸಂಜೆ ವ್ಯವಹಾರದ ಬಗ್ಗೆ ಪೇತ್ರಿ ಜಂಕ್ಷನ್‌ ಬಳಿ ಇರುವ SP ಚಿಕನ್‌ ಸೆಂಟರ್‌ ಎದುರು ಇದ್ದಾಗ ಅದೇ ಸಮಯ KA-53-MN-1299 ನೇ ಕೆಂಪು ಬಣ್ಣದ ತಾರ್‌ ವಾಹನದ ಚಾಲಕನು ಬ್ರಹ್ಮಾವರ ಕಡೆಯಿಂದ ಪೇತ್ರಿ ಜಂಕ್ಷನ್‌ ಬಂದು ಹಿರಿಯಡ್ಕ ಕಡೆಗೆ ಹೋಗುತ್ತಿತ್ತು.

ಪೇತ್ರಿ ಜಂಕ್ಷನ್‌ ನಲ್ಲಿ ಲಿವಿಂಗ್‌ ಪ್ಲವರ್‌ ಸ್ಟಾಲ್‌ ಎದುರು ಹಿರಿಯಡ್ಕ ರೋಡಿಗೆ ಬ್ಯಾರಿಗೇಟ್‌ ಇದ್ದು, ಎದುರಿನಿಂದ 26-BH-4103-F ನೇ ಬಿಳಿ ಬಣ್ಣದ ಮಹಿಂದ್ರ ಕಾರು ಬಂದಿದ್ದರಿಂದ ತಾರ್‌ ವಾಹನ ಚಾಲಕ ಬ್ಯಾರಿಗೇಟ್‌ ಎದುರು ವಾಹನವನ್ನು ನಿಲ್ಲಿಸಿ ಆತನ ಬಲ ಬದಿ ಇದ್ದ ಜಾಗದಲ್ಲಿ ಎದುರಿನ ಕಾರು ಚಾಲಕನಿಗೆ ಮುಂದೆ ಬರಲು ಸನ್ನೆ ಮಾಡಿ ನಂತರ ತಾರ್‌ ಕಾರು ಚಾಲಕ ಕಾರು ಇಳಿದು ಬಂದು ಎದುರಿನ ಕಾರಿನವರಿಗೆ ಮುಂದೆ ಬರಲು ದಾರಿ ಹೇಳಿ ವಾಪಾಸು ಅವನ ಕಾರಿಗೆ ಹೋಗಿ ಕುಳಿತಿರುತ್ತಾನೆ. ಆಗ ಎದುರಿನ ಕಾರಿನಲ್ಲಿದ್ದ ಜಗದೀಶ ಯಾನೆ ಸುನಿಲ್‌ ಶೆಟ್ಟಿ, ಪ್ರಜ್ವಲ್‌ ಶೆಟ್ಟಿ, ಗೌತಮ್‌ ಮತ್ತು ಇನ್ನೋರ್ವ ವ್ಯಕ್ತಿ ಕಾರಿನಿಂದ ಇಳಿದು ಬಂದಿದ್ದು, ತಾರ್‌ ಕಾರು ಚಾಲಕ ಕೂಡ ಕಾರು ಇಳಿದು ಬಂದಿರುತ್ತಾನೆ. ಆಗ ಸುನಿಲ್‌ ಶೆಟ್ಟಿ, ಪ್ರಜ್ವಲ್‌ ಶೆಟ್ಟಿ, ಗೌತಮ್‌ ಮತ್ತು ಇನ್ನೋರ್ವ ವ್ಯಕ್ತಿ ತಾರ್‌ ಕಾರಿನ ಚಾಲಕನೊಂದಿಗೆ ವಾಗ್ವಾದ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ತಾರ್‌ ಕಾರಿನ ಚಾಲಕನ ಕೆನ್ನೆಗೆ ಹೊಡೆದಿದ್ದು, ನಂತರ 4 ಜನ ಸೇರಿ ಕಾರು ಚಾಲಕನಿಗೆ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಆಗ ತಾರ್‌ ಕಾರು ಚಾಲಕ ಹೆದರಿ ಕಾರನ್ನು ಹತ್ತಲು ಕಾರಿನ ಬಳಿ ಹೋದಾಗ ಈ 4 ಜನ ವ್ಯಕ್ತಿಗಳು ಕಾರು ಚಾಲಕನನ್ನು ಕಾರು ಹತ್ತದಂತೆ ಎಳೆದು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ಮಾಡಿ ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 126(2), 115(2̧) 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!