IMG-20241220-WA00051.jpg
Spread the love

ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ದೇಶದ ವಿದ್ಯಾರ್ಥಿಗಳ ಭವಿಷ್ಯವನ್ನೇ ಹೊಸಕಿ ಹಾಕುತ್ತಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.

ನಮ್ಮ ದೇಶವನ್ನು ಆಳುತ್ತಿರುವಂತ ಮೋದಿಯ ನಾಯಕತ್ವದ ಬಿಜೆಪಿ ಸರಕಾರ ಒಂದು ಕಡೆಯಲ್ಲಿ ಬೆಲೆ ಏರಿಕೆಯನ್ನು ಏರಿಸಿ ಬಡವರು ಮಧ್ಯಮ ವರ್ಗದವರು ಕಾರ್ಮಿಕರು ರೈತರು ಭವಿಷ್ಯದಲ್ಲಿ ಮೇಲೆ ಏಳದಂತೆ ಮಾಡಿ ಇದೀಗ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿ ಯುವ ಜನಾಂಗ ವನ್ನು ಮೂಲೆಗುಂಪು ಮಾಡಲು ಹೊರಟಿದೆ ಇಂತಹ ಕೇಂದ್ರ ಸರಕಾರ ಹಾಗೂ ಇಂಥ ಅವ್ಯೆಜ್ಞಾನಿಕ ನೀತಿವುಳ್ಳ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ನಮ್ಮ ದೇಶಕ್ಕೆ ಅಗತ್ಯ ಇದೆಯೇ? ಎಂದು ನಮ್ಮ ದೇಶದ ಜನಸಾಮಾನ್ಯರು. ದೇಶದ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಅರಿತುಕೊಳ್ಳಬೇಕಾಗಿದೆ.
ನೀಟ್ ಪರೀಕ್ಷೆಯನ್ನು ಹಿಡಿದು ನಿರಂತರವಾಗಿ ನಡೆಯುತ್ತಿರುವ ಕೇಂದ್ರ ಸರಕಾರದ ಅದೀನದಲ್ಲಿರುವ ಎಲ್ಲಾ ಪರೀಕ್ಷೆಗಳು ಡೋಲಾಯಮಾನವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ದೇಶದ ಮಾನವ ಸಂಪನ್ಮೂಲ ಸಚಿವರು ಶಿಕ್ಷಣ ಇಲಾಖೆಯ ಮುಖ್ಯಸ್ಥರಾದ ಧರ್ಮೇಂದ್ರ ಪ್ರಧಾನ ರವರ ರಾಜೀನಾಮೆಯನ್ನು ಪಡೆಯಲು ಮೀನಾ ಮೇಷ ಎಣಿಸುತ್ತಿರುವ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದಿಂದ ನಮ್ಮ ದೇಶದ ಜನತೆ ಇನ್ನು ಏನು ಅಪೇಕ್ಷಿಸಲು ಸಾಧ್ಯ? ಕೇವಲ ಬೆಲೆ ಏರಿಕೆಯನ್ನು ಮಾಡಿ ಪೆಟ್ರೋಲ್. ಡೀಸೆಲ್
ಗ್ಯಾಸ್. ಮತ್ತು ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡಿ ಜನಸಾಮಾನ್ಯರಿಗೆ ಬದುಕುಲ ಅಸಾಧ್ಯವಾದಂತಹ ಪರಿಸ್ಥಿತಿಯನ್ನು ತಂದಿಟ್ಟಂತ ಈ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ನಮ್ಮ ದೇಶಕ್ಕೆ ಅಗತ್ಯ ಇದೆಯಾ?
ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

error: No Copying!