ಕಾಪು:ಮೇ ೨೦ (ಹಾಯ್ ಉಡುಪಿ ನ್ಯೂಸ್) ಮೂಡಬೆಟ್ಟು ಗ್ರಾಮದ ವ್ಯಕ್ತಿಯೋರ್ವರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ
ಕಾಪು ತಾಲೂಕು, ಮೂಡುಬೆಟ್ಟು ಗ್ರಾಮ, ಪಲ್ಲಮಾರ ಹೌಸ್ ನಿವಾಸಿ ರೇವತಿ (43) ಇವರು ತನ್ನ ಪತಿ, ಪತಿಯ ತಾಯಿ ಹಾಗೂ ಮಗ ರವರೊಂದಿಗೆ ವಾಸವಾಗಿದ್ದು, ಗಂಡ ಶಶಿಧರ್ ಪೂಜಾರಿ (45) ರವರು ದಿನಾಂಕ 18/05/2022 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ರಾತ್ರಿ ಊಟವಾದ ಬಳಿಕ ಮಲಗಿಕೊಳ್ಳದೇ ಮನೆಯಲ್ಲಿ ಕುಳಿತುಕೊಂಡಿದ್ದು ನನಗೆ ಹೋಗ ಬೇಕು ಎಂದು ರಾತ್ರಿ 11:30 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು, ಮೂಡಬೆಟ್ಟು ಶಂಕರಪುರ , ಕಟಪಾಡಿ, ಉದ್ಯಾವರಗಳಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ದೂರು ನೀಡಿದ್ದು . ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.