Spread the love

ಶಂಕರನಾರಾಯಣ: ಮೇ ೨೦(ಹಾಯ್ ಉಡುಪಿ ನ್ಯೂಸ್) ವ್ರಧ್ಧ ದಂಪತಿಗಳಿಗೆ ವಿನಾಕಾರಣ ಬೈದು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕುಂದಾಪುರ ತಾಲೂಕು ,ಯಡಮೊಗ್ಗೆ ಗ್ರಾಮ, ಕುಂಡ್ಲುಮನೆ ನಿವಾಸಿ ರಾಜೀವಿ (೬೩) ಇವರಿಗೆ ಅದೇ ಗ್ರಾಮದ ರಾಜೇಶ ಯಡಮೊಗ್ಗೆ ಎಂಬಾತ ಯಾವಾಗಲೂ ಬಂದು ಅವಾಚ್ಯ  ಶಬ್ದದಿಂದ ಬೈದು  ಗಲಾಟೆ  ಮಾಡುತ್ತಿದ್ದು, ದಿನಾಂಕ 18.05.2022  ರಂದು ಸುಮಾರು  3;30 ಗಂಟೆಗೆ ಯಡಮೊಗ್ಗೆ ಗ್ರಾಮದ ಕುಂಡ್ಲು ಮನೆ  ಎಂಬಲ್ಲಿಗೆ ಕೈಯಲ್ಲಿ  ಮರದ  ದೊಣ್ಣೆ  ಹಾಗೂ ಚೂರಿಯನ್ನು ಹಿಡಿದುಕೊಂಡು ಬಂದು ರಾಜೀವಿ ಯವರ  ಮನೆಯ  ಸೀಟೌಟ್ ಗೆ ಅಕ್ರಮ ಪ್ರವೇಶ  ಮಾಡಿ ರಾಜೀವಿ ಯವರ ಗಂಡ ಭುಜಂಗ ಶೆಟ್ಟಿ ಯವರನ್ನು ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ವಿರುದ್ದ  ಪೊಲೀಸ್ ಕಂಪ್ಲೇಟ್  ಕೊಡುತ್ತೀಯ  ಎಂದು   ಗಲಾಟೆ  ಮಾಡಿದಾಗ  ಅವರು   ನಿನಗೆ  ಬೇರೆ ಕೆಲಸ ಇಲ್ವಾ  ಯಾಕೆ  ಗಲಾಟೆ ಮಾಡುವುದು ಎಂದು ಕೇಳಿದಾಗ  ಅವರನ್ನು ತಡೆದು ನಿಲ್ಲಿಸಿ ಮರದ  ದೊಣ್ಣೆಯಿಂದ  ಬಲಕೈಗೆ ಹಲ್ಲೆ ಮಾಡಿರುತ್ತಾನೆ, ಈ ಸಮಯ  ರಾಜೀವಿ ಯವರು ಓಡಿ ಬಂದು  ಹೊಡೆಯದಂತೆ  ತಡೆದಾಗ ರಾಜೇಶ ಯಡಮೊಗ್ಗೆ ರಾಜೀವಿ ಯವರಿಗೂ ಹಲ್ಲೆ ಮಾಡಿ ಬೆದರಿಕೆ  ಹಾಕಿ  ಹೋಗಿರುತ್ತಾನೆ ಎಂದು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: No Copying!