Spread the love

ಉಡುಪಿ: ಮೇ ೨೦(ಹಾಯ್ ಉಡುಪಿ ನ್ಯೂಸ್) ರಾಜ್ಯ ಸರ್ಕಾರ ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿ ಶ್ರೀ ನಾರಾಯಣ ಗುರುಗಳ ಬಗೆಗಿನ ಪಠ್ಯವನ್ನು ಕೈ ಬಿಟ್ಟಿರುವ ಬಗ್ಗೆ ಬಿಲ್ಲವ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿರುವಂತೆ;ಇದೀಗ ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿ ಮಾತೆಯರ ಬಗ್ಗೆ ಅತ್ಯಂತ ಕೀಳು ಮನಸ್ಥಿತಿಯಿಂದ ಬರೆದ ಪಠ್ಯವನ್ನು ತೆಗೆದು ಹಾಕಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಲಾಗಿದೆ.

ರಾಜ್ಯ ಸರಕಾರ ಹೊಸದಾಗಿ ರಚಿಸಿದ ಹತ್ತನೇ ತರಗತಿಯ ಭಾಷಾ ಪಠ್ಯ ಪುಸ್ತಕದಲ್ಲಿ ಮಾತೆಯರ ಬಗ್ಗೆ ಅತ್ಯಂತ ಕೀಳು ಮನಸ್ಥಿತಿಯಿಂದ ಬನ್ನಂಜೆ ಗೋವಿಂದ ಆಚಾರ್ಯ ಬರೆದ ಕೀಳು ಅಭಿರುಚಿಯ ಲೇಖನ ಪಠ್ಯವಾಗಿದೆ. ಇದು ಖಂಡನೀಯ, ಇಂಥ ಹೀನ ಮನಸ್ಥಿತಿಯ ಚಿಂತನೆ ಮಕ್ಕಳಿಗೆ ಪಠ್ಯವಾಗಲೇ ಬಾರದು.ಪಠ್ಯವನ್ನು ತೆಗೆದು ಹಾಕದೇ ಇದ್ದರೆ , ತೆಗೆದು ಹಾಕುವಂತೆ ರಾಜ್ಯದ ಸರ್ವ ಜನರೂ ಒತ್ತಾಯಿಸದೆ ಇದ್ದರೆ ಮುಂದಿನ ಜನ ಸಮುದಾಯವೇ ಅದ್ಹಪತನ ಗೊಳ್ಳುವುದರಲ್ಲಿ ಯಾವ ಅನುಮಾನ ವೂ ಇಲ್ಲ.

ಈ ಪಠ್ಯವನ್ನು ಕೂಡಲೇ ತೆಗೆದು ಹಾಕುವಂತೆ ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳು, ಮಹಿಳಾ ಸಂಘಟನೆಗಳು, ಪಕ್ಷಗಳ ಮಹಿಳಾ ವಿಭಾಗಗಳು, ಯುವಕ – ಯುವತಿ ಮಂಡಲಗಳು, ವಿದ್ಯಾರ್ಥಿ ಸಂಘಟನೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಿತ ಸರ್ವರೂ, ಪಠ್ಯ ತೆಗೆದು ಹಾಕುವವರೆಗೂ ನಿರಂತರ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀರಾಮದಿವಾಣ ಆಗ್ರಹಿಸಿದ್ದಾರೆ.

error: No Copying!