ಮಣಿಪಾಲ: ದಿನಾಂಕ 05/05/2026 (ಹಾಯ್ ಉಡುಪಿ ನ್ಯೂಸ್) ಸಗ್ರಿನೋಳೆಯ ಹಾಡಿ ಯೊಂದರಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರು ದಿನಾಂಕ :03-05-2026 ರಂದು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಸಗ್ರಿ ನೋಳೆಯ ಪೆರಂಪಳ್ಳಿ ಹೋಗುವ ರಸ್ತೆಯ ಎಡ ಬದಿಯಲ್ಲಿರುವ ಹಾಡಿಯಲ್ಲಿ ಜನರು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದಾಗಿ ಸಾರ್ವಜನಿಕ ಮಾಹಿತಿ ಬಂದಂತೆ ಕೂಡಲೇ ದಾಳಿ ನಡೆಸಿದ್ದಾರೆ .
ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಕೆಲವು ಜನರು ನೆಲದಲ್ಲಿ ನೀಲಿ ಬಣ್ಣದ ತಾಡಪಾಲು ಹಾಕಿ ಸುತ್ತ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದವರನ್ನು ಪೊಲೀಸರು ಸುತ್ತುವರಿದು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 1.ರುದ್ರಯ್ಯ (37), ಹನುಮಾನ್ ದೇವಸ್ಥಾನದ ಬಳಿ, ಅಂಬಾಗಿಲು, ಉಡುಪಿ, 2.ಕೃಷ್ಣ ಗಾಣಿಗ (46), ಕೇದಾರ್, ಉದ್ಯಾವರ ಗ್ರಾಮ, ಉಡುಪಿ, 3.ಸಿಂದೂರಪ್ಪ ಹಿರೇಮನಿ (47), ನಿಟ್ಟೂರು ಶಾಲೆ ಹತ್ತಿರ, ಪುತ್ತೂರು ಗ್ರಾಮ, ಉಡುಪಿ, 4.ಶರತ್ ಕುಮಾರ್ (28), 80 ಬಡಗುಬೆಟ್ಟು ಗ್ರಾಮ, ಉಡುಪಿ ಎಂಬುದಾಗಿ ತಿಳಿಸಿದ್ದು, ನಂತರ ನೀಲಿ ಬಣ್ಣದ ತಾಡಪಾಲು ಮೇಲೆ ಇದ್ದ ಒಟ್ಟು 10,800/- ರೂಪಾಯಿ ಹಾಗೂ ಇಸ್ಪೀಟು ಎಲೆಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳ ಮೊಬೈಲ್ ಹಾಗೂ ತಾಡಪಾಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.
