ಕಾರ್ಕಳ: ದಿನಾಂಕ:05-05-2026(ಹಾಯ್ ಉಡುಪಿ ನ್ಯೂಸ್) ಬೆಳ್ಮಣ್ ಗ್ರಾಮದ ನಿವಾಸಿಯೋರ್ವರಿಗೆ ಕ್ಯಾನ್ಸರ್ ರೋಗಕ್ಕೆ ಆಯುರ್ವೇದಿಕ್ ಚಿಕಿತ್ಸೆ ನೀಡಿಸುವುದಾಗಿ ನಂಬಿಸಿ 12.10 ಲಕ್ಷ ರೂಪಾಯಿ ವಂಚಿಸಿದ್ದಾರೆಂದು ರೊನಾಲ್ಡ್ ರೋಡ್ರಿಗಸ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ರೊನಾಲ್ಡ್ ರೋಡ್ರಿಗಸ್ (68) ಎಂಬವರು ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಹೆಂಡತಿ ರೋಸಿ ಜೊತೆ ವಾಸ್ತವ್ಯ ವಿದ್ದು, ರೊನಾಲ್ಡ್ ರೋಡ್ರಿಗಸ್ ಅವರ ಹೆಂಡತಿ ಕ್ಯಾನ್ಸರ್ ರೋಗಿಯಾಗಿದ್ದು ಅಲ್ಲದೆ ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 23/03/2026 ರಂದು ಹೆಂಡತಿಯನ್ನು ಫಿಸಿಯೋಥೆರಫಿ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ರೊನಾಲ್ಡ್ ರೋಡ್ರಿಗಸ್ ಅವರಿಗೆ ಉಡುಪಿಯ ಕಡಿಯಾಳಿ ದೇವಸ್ಥಾನದ ಬಳಿ ಸಿದ್ದಾರ್ಥ್ ಎಂಬ ಹೆಸರಿನ ವ್ಯಕ್ತಿಯ ಪರಿಚಯವಾಗಿ, ಆತನು ತನ್ನ ತಾಯಿಯು ಕೂಡಾ ಇಂತಹದೇ ಖಾಯಿಲೆಯಿಂದ ಬಳಲುತ್ತಿದ್ದು, ಅವರು ಆಯುರ್ವೇದಿಕ್ ಚಿಕಿತ್ಸೆ ಮುಖಾಂತರ ಗುಣ ಮುಖವಾಗಿದ್ದು, ನಿಮ್ಮ ಪತ್ನಿಗೂ ಅದೇ ರೀತಿ ಚಿಕಿತ್ಸೆ ನೀಡಿ ಗುಣಪಡಿಸುತ್ತೇವೆ ಎಂದು, ಆತನು ಮಾಧವ ಎಂಬ ಹೆಸರಿನ ವ್ಯಕ್ತಿಯ ಪೋನ್ ನಂಬ್ರ ನೀಡಿ ಪರಿಚಯಿಸಿದ್ದು ಮಾಧವನು ಆಯುರ್ವೇದಿಕ್ ಚಿಕಿತ್ಸೆ ಪಡೆಯಲು ಸುಮಾರು ಹಣ ಖರ್ಚಾಗುತ್ತದೆ ಎಂದು ನಂಬಿಸಿ ರೊನಾಲ್ಡ್ ರೋಡ್ರಿಗಸ್ ರಿಂದ ಅವರ ಗೂಗಲ್ ಪೇ ಯಿಂದ ಮಾಧವ ತಿಳಿಸಿದ ಅನಿಲ್ ಪವಾರ್ ಎಂಬ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಿರುತ್ತಾರೆ.
ಆಪಾದಿತ ಸಿದ್ದಾರ್ಥ್ ನು ಹೆಚ್ಚಿನ ಹಣಕ್ಕೆ ಭೇಡಿಕೆ ಇಟ್ಟಿದ್ದರಿಂದ ರೊನಾಲ್ಡ್ ರೋಡ್ರಿಗಸ್ ರು ಅದೇ ದಿನ ತಾನು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಿಂದ ಎ.ಟಿ.ಎಂ. ಮುಖೇನ 40,000/- ರೂಪಾಯಿಗಳನ್ನು ಹಣ ತೆಗೆದು ಆಪಾದಿತ ಸಿದ್ದಾರ್ಥ್ ಗೆ ನೀಡಿದ್ದು, ಅಲ್ಲದೆ ಆಪಾದಿತ ಸಿದ್ದಾರ್ಥ್ ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಾತನಾಡಲು ಉಡುಪಿಯ ಮಾಂಡವಿ ಬಿಲ್ಡಿಂಗ್‌ನಲ್ಲಿರುವ ಆರ್ಯುವೇದಿಕ್ ಔಷಧಿ ಅಂಗಡಿಗೆ ಬರುವಂತೆ ತಿಳಿಸಿದಂತೆ ರೊನಾಲ್ಡ್ ರೋಡ್ರಿಗಸ್ ರು ಆಪಾದಿತ ಸಿದ್ದಾರ್ಥ್ ನ ಜೊತೆಗೆ ಆಯುರ್ವೇದಿಕ್ ಔಷಧಿ ಅಂಗಡಿಗೆ ತೆರಳಿದಾಗ ಅಲ್ಲಿ ಅನಿಲ್ ಎಂಬ ವ್ಯಕ್ತಿಯನ್ನು ಪರಿಚಯಿಸಿದ್ದು ಈ ಸಮಯ ಅನಿಲ್ ಮತ್ತು ಮಾಧವ ರವರು ಅಂಗಡಿಯಿಂದ ಕೆಲವು ಔಷಧಿಗಳನ್ನು ತೆಗೆದುಕೊಂಡು ಕೊಟ್ಟರೆ ಖಾಯಿಲೆಯು ಸರಿ ಆಗುತ್ತದೆ ಎಂದು ನಂಬಿಸಿ, ಈ ಬಗ್ಗೆ ರೊನಾಲ್ಡ್ ರೋಡ್ರಿಗಸ್ ರವರಲ್ಲಿ ಔಷಧಿಗೆ 10,80,000/- ರೂಪಾಯಿಗಳನ್ನು ನೀಡುವಂತೆ ತಿಳಿಸಿದಂತೆ ರೊನಾಲ್ಡ್ ರೋಡ್ರಿಗಸ್ ರವರು ಅವರ ಕಚೇರಿಯಲ್ಲಿ ರೊನಾಲ್ಡ್ ರೋಡ್ರಿಗಸ್ ರವರು ಹೆಚ್.ಡಿ.ಎಫ್.ಸಿ.. ಬ್ಯಾಂಕ್ ನಲ್ಲಿ ಹೊಂದಿರುವ ಖಾತೆ ಸಂಖ್ಯೆ ಚೆಕ್ 000002 ರಲ್ಲಿ 3,00,000/-, ಚೆಕ್ ನಂಬ್ರ 000003 ರಲ್ಲಿ 3,00,000/- , ಚೆಕ್ ನಂಬ್ರ 00005 ರಲ್ಲಿ 3,00,000/-, ಚೆಕ್ ನಂಬ್ರ 00004 ರಲ್ಲಿ 1,80,000/- ರಂತೆ ಆಪಾದಿತ ಅನಿಲ್ ಎಂಬಾತನಿಗೆ ಪಾವತಿಸುವಂತೆ ತಮ್ಮ ಸಹಿ ಮಾಡಿದ ಚೆಕ್ ನ್ನು ನೀಡಿದ್ದು ಈ ಬಗ್ಗೆ ಆಪಾದಿತರಾದ ಅನಿಲ್ ಹಾಗೂ ಮಾಧವ ರವರು ನೀಡಿದ ಔಷಧಿಗಳನ್ನು ರೊನಾಲ್ಡ್ ರೋಡ್ರಿಗಸ್ ರವರು ಪಡೆದು ಮನೆಗೆ ಬಂದಿದ್ದು, ಆಪಾದಿತರು ನೀಡಿದ ಔಷಧಿಗಳನ್ನು ತಮ್ಮ ಪತ್ನಿಗೆ ನೀಡಿದರೂ ಇದುವರೆಗೆ ಅವರು ಗುಣಮುಖರಾಗದೇ ಇದ್ದ ಕಾರಣ ಆಪಾದಿತರು ರೊನಾಲ್ಡ್ ರೋಡ್ರಿಗಸ್ ರವರಿಗೆ ನೀಡಿದ ಪೋನ್ ನಂಬ್ರಗಳಿಗೆ ಕರೆ ಮಾಡಿದಲ್ಲಿ ಆ ಮೊಬೈಲ್ ನಂಬ್ರಗಳು ಸ್ವಿಚ್ ಆಫ್ ಆಗಿದ್ದು ಆಪಾದಿತರಾದ ಸಿದ್ದಾರ್ಥ, ಅನಿಲ್,ಮಾಧವ ಎಂಬವರು ರೊನಾಲ್ಡ್ ರೋಡ್ರಿಗಸ್ ರ ಹೆಂಡತಿಗೆ ಇರುವ ಖಾಯಿಲೆಯನ್ನು ಗುಣಪಡಿಸುವುದಾಗಿ ನಂಬಿಸಿ ರೊನಾಲ್ಡ್ ರೋಡ್ರಿಗಸ್ ರಿಂದ ಒಟ್ಟು 12,09,160/- ರೂಪಾಯಿಗಳನ್ನು ಪಡೆದು ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರೊನಾಲ್ಡ್ ರೋಡ್ರಿಗಸ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 318(2), 318(4) BNS ರಂತೆ ಪ್ರಕರಣ ದಾಖಲಾಗಿದೆ.
