ದಿನಾಂಕ: 03/05/2026 ರಂದು ವೃತ್ತ ನಿರೀಕ್ಷಕರು ಕುಂದಾಪುರ ವೃತ್ತ ಹಾಗೂ ಕುಂದಾಪುರ ಗ್ರಾಮಾಂತರ ಠಾಣಾ ಉಪನಿರೀಕ್ಷಕರು (ಕಾ.ಸು)ರವರ ಸಮಕ್ಷಮ ದಲ್ಲಿ ಠಾಣಾ ಸರಹದ್ದಿನ ರೌಡಿ ಗಳ ಪರೇಡ್ ನಡೆಸಿ ರೌಡಿ ಅಸಾಮಿಗಳಿಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೆ ಉತ್ತಮ ರೀತಿಯಲ್ಲಿ ಜೀವನ ನಡೆಸುವಂತೆ ತಿಳಿಸಿದರು .
ಈ ಹಿಂದೆ ನಡೆದ ಪ್ರಕರಣಗಳನ್ನು ಬೇಗ ವಿಲೇವಾರಿ ಮಾಡಿಕೊಂಡು ಮುಂದೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸಮಾಜದಲ್ಲಿ ಶಾಂತಿಯುತವಾಗಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಯಾಗದಂತೆ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಕ್ತ ಮುಚ್ಚಳಿಕೆ ಬರೆದು ಕೊಡುವಂತೆ ರೌಡಿ ಅಸಾಮಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
