ಬ್ರಹ್ಮಾವರ: ದಿನಾಂಕ:05-05-2026(ಹಾಯ್ ಉಡುಪಿ ನ್ಯೂಸ್)ಅನಾರೋಗ್ಯ ಪೀಡಿತ ಮಹಿಳೆ ಯೋರ್ವರನ್ನು ಆರೈಕೆ ಮಾಡಲೆಂದು ಮನೆಯಲ್ಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಯೋರ್ವರು ಚಿನ್ನಾಭರಣ ಕದ್ದು ಪರಾರಿಯಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ನಿವಾಸಿ ಆಶಾ ಎಸ್ ಪೂಜಾರಿ (42) ಎಂಬವರ ತಂದೆ, ತಾಯಿ ಹೇರೂರು ಗ್ರಾಮದಲ್ಲಿ ವಾಸವಾಗಿದ್ದು ತಾಯಿ ಯವರ ಮೊಣಗಂಟಿಗೆ ಪ್ರ್ಯಾಕ್ಚರ್ ಆಗಿರುವುದರಿಂದ ಅವರನ್ನು ನೋಡಿಕೊಳ್ಳಲು 2026 ನೇ ಮಾರ್ಚ್ ತಿಂಗಳ ಆರಂಭದಿಂದ ಆರೂರಿನ ಲತಾ ಎಂಬವರನ್ನು ಕೆಲಸಕ್ಕೆ ನೇಮಿಸಿದ್ದಾರೆ.
ದಿನಾಂಕ: 01/04/2026 ರಂದು ಆಶಾ ಎಸ್ ಪೂಜಾರಿ ಯವರ ತಂದೆ ಮನೆಯಲ್ಲಿ ಕಪಾಟಿನಲ್ಲಿಟ್ಟಿದ್ದ ಅವರ 25 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟ್ ಮತ್ತು ಚಿನ್ನ ದ 4 ಗ್ರಾಂ ತೂಕದ ಉಂಗುರವನ್ನು ಹಾಕಿಕೊಳ್ಳಲು ಮಧ್ಯಾಹ್ನ ಸಮಯಕ್ಕೆ ಮನೆಯ ಕಪಾಟನ್ನು ತೆರೆದು ನೋಡಿದಾಗ ಚಿನ್ನಾಭರಣ ಕಾಣದೇ ಇದ್ದು, ಈ ಬಗ್ಗೆ ಮನೆ ಕೆಲಸದಾಕೆ ಲತಾಳನ್ನು ವಿಚಾರಿಸಿದಾಗ ತಾನು ಚಿನ್ನವನ್ನು ತೆಗೆದು ಮುತ್ತೂಟ್ ಪೈನಾನ್ಸ್‌ನಲ್ಲಿ ಅಡವಿಟ್ಟಿರುವುದಾಗಿ ತಿಳಿಸಿ, ತಾನು ಅಡವಿಟ್ಟ ಚಿನ್ನವನ್ನು ಬಿಡಿಸಿ ಕೊಡುವುದಾಗಿ ಹೇಳಿರುತ್ತಾಳೆ.
ಆಶಾ ಎಸ್ ಪೂಜಾರಿ ಯವರು ಆಕೆಯ ಮಾತನ್ನು ನಂಬಿ ದೂರು ದಾಖಲಿಸಿರುವುದಿಲ್ಲ. ಈವರೆಗೂ ಲತಾಳು ಚಿನ್ನವನ್ನು ಬಿಡಿಸಿಕೊಟ್ಟಿರುವುದಿಲ್ಲ ಹಾಗೂ ಆಕೆ ಸಂಪರ್ಕಕ್ಕೆ ಸಿಗದೇ ಇದ್ದ ಕಾರಣ ತಡವಾಗಿ ದೂರು ದಾಖಲಿಸುತ್ತಾ ಇರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಶಾ ಎಸ್ ಪೂಜಾರಿ ಅವರು ತಿಳಿಸಿದ್ದಾರೆ.
ಕಳುವಾದ ಚಿನ್ನದ ಮೌಲ್ಯ 3,50,000/- ರೂಪಾಯಿ ಆಗುತ್ತದೆ ಎಂದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 306 BNS ರಂತೆ ಪ್ರಕರಣ ದಾಖಲಾಗಿದೆ.
